40 ದಿನದ ಮಗುವಿನ ಬಾಯಿಗೆ ಟಿಶ್ಯೂ ಪೇಪರ್ ತುರುಕಿ ಕೊಂದ ತಾಯಿ; ಕಾರಣ ಶಾಕಿಂಗ್!

Mother Kills Baby: ಮಗುವನ್ನು ತಾಯಿಯೇ ಕೊಂದಿರುವ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಗಂಡನ ಪ್ರೀತಿ ಕಡಿಮೆಯಾಗಿದೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆರೋಪಿ ತಾಯಿಯನ್ನು ಬಂಧನ ಮಾಡಿದ್ದಾರೆ.

ಬೆನಿತಾ ಜಯ ಅನ್ನಲ್ (20) ಆರೋಪಿ ತಾಯಿ.
ಬೆನಿತಾ ಕನ್ಯಾಕುಮಾರಿ ಜಿಲ್ಲೆಯ ಕರುಂಗಲ್ ಬಳಿಯ ಬಾಲೂರು ಕಟ್ಟುವಿಲೈ ಪ್ರದೇಶದ ನಿವಾಸಿ. ಈಕೆಯನ್ನು ಒಂದು ವರ್ಷದ ಹಿಂದೆ ದಿಂಡಿಗಲ್ ಜಿಲ್ಲೆಯ ಉತ್ತರ ವೇದಚಂದೂರಿನ ನಾಗಕೋಣನೂರು ಪ್ರದೇಶದ ಕಾರ್ತಿಕ್ (21) ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಬ್ಬರಿಗೆ 40 ದಿನಗಳ ಹಿಂದೆ ಹೆಣ್ಣು ಮಗು ಜನಿಸಿತ್ತು.
ಮದುವೆಯ ನಂತರ ಪತ್ನಿ ಮನೆಯಲ್ಲಿಯೇ ಕಾರ್ತಿಕ್ ವಾಸವಾಗಿದ್ದ. ಈತ ಖಾಸಗಿ ಕಂಪನಿಯ ಉದ್ಯೋಗಿ ಮಗುವಿನ ಬಾಯಲ್ಲಿ ಟಿಶ್ಯೂ ಪೇಪರ್ ತುರುಕಿ ತಾಯಿ ಕೊಲೆ ಮಾಡಿದ್ದಾಳೆ ಎಂದು ವರದಿಯಾಗಿದೆ.
ಸೆ.9 ರಂದು ಕಾರ್ತಿಕ್ ಎಂದಿನಂತೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಬಂದಿದ್ದರು. ಮಗುವನ್ನು ಎತ್ತಿದಾಗ ಅದರಲ್ಲಿ ಯಾವುದೇ ಚಲನೆ ಇರಲಿಲ್ಲ. ಉಸಿರಾಟ ನಿಂತಿದ್ದರಿಂದ ಗಾಬರಿಯಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಪರಿಶೀಲನೆ ಮಾಡಿದಾಗ ಮಗು ಸಾವಿಗೀಡಾಗಿರುವುದು ಕಂಡು ಬಂದಿದೆ.
ಮಗುವಿನ ಹಣೆಯ ಮೇಲೆ ಕೂಡಾ ಗಾಯವಾಗಿದ್ದು, ಈ ಕುರಿತು ಪತ್ನಿಯನ್ನು ಕೇಳಿದಾಗ ಹಾಲು ಕುಡಿಯುವಾಗ ಮಗು ಕೆಳಗೆ ಬಿದ್ದು ಗಾಯವಾಗಿದೆ ಎಂದು ಹೇಳಿದ್ದರು. ಈ ಕುರಿತು ಕಾರ್ತಿಕ್ ಕರುಂಗಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದು, ದೂರು ದಾಖಲಿಸಿದ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಆಸರಿಪಲ್ಲಂ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದರು.
ಶವಪರೀಕ್ಷೆ ವರದಿ ನೋಡಿ ಪೊಲೀಸರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದು, ಮಗುವನ್ನು ಕೊಲೆ ಮಾಡಿರುವುದು ವರದಿಯಲ್ಲಿ ಬಹಿರಂಗಗೊಂಡಿದೆ.
ಇದನ್ನೂ ಓದಿ:Mizoram: ಮಿಜೋರಾಂನ ಮೊದಲನೇ ರೈಲು ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮಗುವಿನ ತಾಯಿಯನ್ನು ವಿಚಾರಣೆ ಮಾಡಿದಾಗ, ತಾನು ಮಗುವನ್ನು ಕೊಂದಿರುವುದಾಗಿ ಹೇಳಿದ್ದಾಳೆ. ಮಗು ಹುಟ್ಟಿದಾಗಿನಿಂದ ಗಂಡನಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ. ಹಾಗಾಗಿ ಮನೆಯಲ್ಲಿ ಸಮಸ್ಯೆಗಳಿದ್ದವು. ಹಾಗಾಗಿ ಕೋಪದಿಂದ ಮಗುವಿನ ಬಾಯಿಗೆ ಕಾಗದವನ್ನು ತುರುಕಿದ್ದಳು ಎಂದು ವರದಿಯಾಗಿದೆ.
ಬೆನಿತಾಳನ್ನು ಜೈಲಿಗೆ ಕಳುಹಿಸಲಾಗಿದೆ.
Comments are closed.