Hasana: ಹಾಸನದಲ್ಲಿ ʼಗಣಪತಿ ವಿಸರ್ಜನೆ” ವೇಳೆ ಟ್ರಕ್‌ ಹರಿದು 9 ಮಂದಿ ಸಾವು

Share the Article

Hasana: ಹಾಸನದಲ್ಲಿ ಗಣಪತಿ ವಿಸರ್ಜನೆ ಸಮಯದಲ್ಲಿ ಟ್ರಕ್‌ ಹರಿದು 9 ಮಂದಿ ಸಾವಿಗೀಡಾದ ಘಟನೆ ನಡೆದಿದೆ. ಇದರ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದು, ಸಂಭ್ರಮದಿಂದ ಆನಂದಿಸುತ್ತಿದ್ದ ಜನರ ಮೇಲೆ ಟ್ರಕೊಂದು ಏಕಾಏಕಿ ನುಗ್ಗಿ, 9 ಜನರು ಸಾವಿಗೀಡಾಗಿದ್ದಾರೆ. ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ರಾತ್ರಿ 8 ರಿಂಚ 8.45 ರ ನಡುವೆ ನಡೆದಿದೆ. ಗಣೇಶ ಹಬ್ಬದ ಅಂತಿಮ ವಿಧಿ ವಿಧಾನಗಳಲ್ಲಿ ಜನರು ಭಾಗವಹಿಸಿದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಒಟ್ಟು 22 ಜನರು ಗಾಯಗೊಂಡಿದ್ದಾರೆ ಎಂದು ಹಾಸನ ಜಿಲ್ಲಾಧಿಕಾರಿ ಕೆ.ಎಸ್.‌ಲತಾ ಕುಮಾರಿ ದೃಢಪಡಿಸಿದರು.

ಇದನ್ನೂ ಓದಿ:ಅಲ್ಬೇನಿಯಾ: ಭ್ರಷ್ಟಾಚಾರ ನಿಗ್ರಹಕ್ಕೆ ಬಂದಿದ್ದಾಳೆ ವಿಶ್ವದ ಮೊದಲ AI ಸಚಿವೆ ಡಿಯೆಲ್ಲಾ!

Comments are closed.