Government employees: ರಾಜ್ಯ ಸರ್ಕಾರಿ ನೌಕರರಿಗೆ ‘ಸಂಬಳ ಪ್ಯಾಕೇಜ್’ನಲ್ಲಿ ನೋಂದಾಯಿಸಿಕೊಳ್ಳಲು ಕಾಲಾವಧಿ ವಿಸ್ತರಣೆ

Government employees: ರಾಜ್ಯ ಸರ್ಕಾರದಿಂದ ನೇರವಾಗಿ, ಪರೋಕ್ಷವಾಗಿ ನೇಮಕಗೊಂಡಿರುವ ಪ್ರತಿಯೊಬ್ಬ ಎ ಗುಂಪಿನ ಅರ್ಹ ಅಧಿಕಾರಿಗಳು (Government employees) ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿತ್ತು. ಇದರಡಿ ಹೆಚ್ಚುವರಿಯಾಗಿ 15 ದಿನಗಳ ಕಾಲಾವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ.


ಇದೀಗ ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, ಎಲ್ಲಾ ಅರ್ಹ ‘ಎ’ ಗುಂಪಿನ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ: 15.09.2025ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು ಎಂದಿದ್ದಾರೆ. ಆದರೆ, ‘ಎ’ ಗುಂಪಿನ ಅಧಿಕಾರಿಗಳು ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ, ‘ಎ’ ಗುಂಪಿನ ಅಧಿಕಾರಿಗಳಿಗೆ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ದಿನಾಂಕ:30.09.2025ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ:RTO: ವಾಹನಗಳ ಎನ್‌ಒಸಿ ಪಡೆಯಲು ಇನ್ಮುಂದೆ ಈ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ
Comments are closed.