Home News MLA Pension : ರಾಜ್ಯದ ಮಾಜಿ ಶಾಸಕರಿಗೆ, ದಿವಂಗತರಾದ MLA ಕುಟುಂಬದವರಿಗೆ ಸರ್ಕಾರ ನೀಡೋ ಸವಲತ್ತೆನು...

MLA Pension : ರಾಜ್ಯದ ಮಾಜಿ ಶಾಸಕರಿಗೆ, ದಿವಂಗತರಾದ MLA ಕುಟುಂಬದವರಿಗೆ ಸರ್ಕಾರ ನೀಡೋ ಸವಲತ್ತೆನು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

MLA Pension : ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ಬಳಿಕ ಅವರಿಗೆ ನಿವೃತ್ತಿ ವೇತನ ದೊರೆಯುವ ಕುರಿತು ಎಲ್ಲರಿಗೂ ತಿಳಿದಿದೆ. ಆದರೆ ಚುನಾವಣೆಯಲ್ಲಿ ಗೆದ್ದು ಕೇವಲ ಐದು ವರ್ಷಗಳ ಕಾಲ ಎಮ್ಎಲ್ಎ ಆಗಿದ್ದರು ಕೂಡ ಅವರಿಗೆ ನಿವೃತ್ತಿ ವೇತನ ಸಿಗುತ್ತದೆ ಎಂಬುದು ನಿಮಗೆ ಗೊತ್ತಾ? ಐದು ವರ್ಷ ಮಾತ್ರವಲ್ಲ ಅವರು ಒಂದು ದಿನ ಎಂಎಲ್ಎ ಆಗಿ ರಾಜೀನಾಮೆ ನೀಡಿದರು ಕೂಡ ಅವರಿಗೆ ಈ ಎಲ್ಲ ಸವಲತ್ತುಗಳು ಸಿಗುತ್ತವೆ. ಹೌದು, ಸರ್ಕಾರ ಮಾಜಿ ಶಾಸಕರಿಗೆ ಹಾಗೂ ದಿವಂಗತರಾದ ಶಾಸಕರ ಕುಟುಂಬದವರಿಗೆ ಅನೇಕ ಸವಲತ್ತುಗಳನ್ನು ನೀಡುತ್ತದೆ.

ಯಸ್, ವಿಧಾನಸಭೆ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ವೆಚ್ಚಗಳ ಮರುಪಾವತಿಗಾಗಿಯೇ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಹಾಲಿ ಇರುವ ಶಾಸಕರಿಗೆ ಸರ್ಕಾರ ಭಾರೀ ಪ್ರಮಾಣದ ಹಣ ಖರ್ಚು ಮಾಡೋದು ಮಾತ್ರವಲ್ಲ, ಮಾಜಿ ಶಾಸಕರು ಹಾಗೂ ದಿವಂಗತ ಮಾಜಿ ಶಾಸಕರುಗಳ ಕುಟುಂಬಗಳಿಗೂ ಸರ್ಕಾರ ಭತ್ಯೆಯನ್ನು ನೀಡುತ್ತದೆ.

ಮಾಜಿ ಶಾಸಕರು ಹಾಗೂ ದಿವಂಗತ ಮಾಜಿ ಶಾಸಕರುಗಳ ಕುಟುಂಬಗಳಿಗೆ, ಪ್ರತಿ ತಿಂಗಳ ನಿವೃತ್ತಿ ವೇತನವಾಗಿ ಸರ್ಕಾರ 75 ಸಾವಿರ ರೂಪಾಯಿ ನೀಡುತ್ತೆ. ಅಲ್ಲದೆ ಪ್ರತಿ ಹೆಚ್ಚುವರಿ ಅವಧಿಗೆ ಆಯ್ಕೆ ಆಗಿದ್ದರೆ, ಪ್ರತಿ ತಿಂಗಳಿಗೆ 20 ಸಾವಿರ ರೂಪಾಯಿ ಮೊತ್ತವನ್ನು ನೀಡಲಾಗುತ್ತದೆ. ವೈದ್ಯಕೀಯ ಭತ್ಯೆ ಎಂದು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಾವತಿ ಮಾಡಲಾಗುತ್ತದೆ. ಹೆಚ್ಚುವರಿ ಅವಧಿಗೆ ಆಯ್ಕೆ ಆಗಿದ್ದರೆ, 10 ಸಾವಿರ ರೂಪಾಯಿ ಹಣವನ್ನು ಸರ್ಕಾರ ಪಾವತಿ ಮಾಡುತ್ತದೆ.

ಇಷ್ಟಲ್ಲದೆ ಕುಟುಂಬ ನಿವೃತ್ತಿ ವೇತನ ಎನ್ನುವ ರೂಪದಲ್ಲಿ ಪ್ರತಿ ತಿಂಗಳು 37,500 ರೂಪಾಯಿ ಹಣ ನೀಡಲಾಗುತ್ತಿದೆ.ಪ್ರತಿ ಹೆಚ್ಚುವರಿ ಅವಧಿಗೆ ಪ್ರತಿ ತಿಂಗಳು 10 ಸಾವಿರ ರೂ ನೀಡಲಾಗುತ್ತದೆ.ವೈದ್ಯಕೀಯ ಭತ್ಯೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಇರಲಿದೆ. ಇನ್ನು ಮಾಜಿ ಶಾಸಕರಿಗೆ ರೈಲ್ವೆ ಹಾಗೂ ವಿಮಾನ ಪ್ರಯಾಣ ಭತ್ಯೆ ಎಂದು ವಾರ್ಷಿಕವಾಗಿ 2 ಲಕ್ಷ ರೂಪಾಯಿವನ್ನು ಸರ್ಕಾರ ಪಾವತಿ ಮಾಡುತ್ತದೆ. ಇದರ ಮಾಜಿ ಶಾಸಕರುಗಳಿಗೆ ಸರ್ಕಾರದ ವತಿಯಿಂದ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನೂ ಒದಗಿಸಲಾಗಿದೆ.

ಇದನ್ನೂ ಓದಿ:Government employees: ರಾಜ್ಯ ಸರ್ಕಾರಿ ನೌಕರರಿಗೆ ‘ಸಂಬಳ ಪ್ಯಾಕೇಜ್’ನಲ್ಲಿ ನೋಂದಾಯಿಸಿಕೊಳ್ಳಲು ಕಾಲಾವಧಿ ವಿಸ್ತರಣೆ

ಅಂದಹಾಗೆ ಇತ್ತೀಚೆಗೆ ವಿಜಯ್‌ರಾವ್‌ ಕುಲಕರ್ಣಿ ಎನ್ನುವವರು ಆರ್‌ಟಿಐ ಮೂಲಕ ಮಾಹಿತಿ ಕೇಳಿ ಅರ್ಜಿ ಹಾಕಿದ್ದರು. ಇದಕ್ಕೆ ಕರ್ನಾಟಕ ವಿಧಾನಸಭೆಯ ಸಚಿವಾಲಯದ ಕಾರ್ಯದರ್ಶಿ ಉತ್ತರ ನೀಡಿದ್ದಾರೆ. ಈ ಮೇಲಿನ ಮಾಹಿತಿಯು ಈ ಉತ್ತರವನ್ನು ಪರಿಗಣಿಸಿದೆ.