Home News Karnataka: “ಡಯಾಲಿಸಿಸ್” ರೋಗಿಗಳಿಗೆ ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ದೊರೆಯಲಿದೆ

Karnataka: “ಡಯಾಲಿಸಿಸ್” ರೋಗಿಗಳಿಗೆ ಇನ್ಮುಂದೆ ಮನೆಯಲ್ಲೇ ಚಿಕಿತ್ಸೆ ದೊರೆಯಲಿದೆ

Hindu neighbor gifts plot of land

Hindu neighbour gifts land to Muslim journalist

Karnataka: ಕರ್ನಾಟಕದಲ್ಲಿ (Karnataka) ಪರಿಟೋನೀಯಲ್ ಡಯಾಲಿಸಿಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನುಮೋದನೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ನಡವಳಿಯನ್ನು ಹೊರಡಿಸಿದ್ದು, ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಸ್ವೀಕೃತವಾದ ಏಕಕಡತ ಸಂಖ್ಯೆ: HFWS – DLSOFILE/20/2025 (1780906) ರಲ್ಲಿ ಕರ್ನಾಟಕದಲ್ಲಿ ಮೂತ್ರಪಿಂಡದ ಕಾಯಿಲೆ ಹಾಗೂ ಎಂಡ್-ಸೈಜ್ ರಿನಲ್ ಕಾಯಿಲೆ (ESRD) ಗಳು ಹೆಚ್ಚಾಗುತ್ತಿದ್ದು, ಇದರಿಂದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಎದುರಾಗುತ್ತಿದೆ. ಮೂತ್ರಪಿಂಡ ಕಾಯಿಲೆಗೆ ಮುಖ್ಯವಾದ Renal Replacement Therapy (RRT) ಆಗಿರುವ ಹೀಮೊಡಯಾಲಿಸಿಸ್ ಸೌಲಭ್ಯಗಾಗಿ ವಿಶೇಷ ಮೂಲಸೌಕರ್ಯ ಮತ್ತು ಕಡ್ಡಾಯವಾಗಿ ಆಸ್ಪತ್ರೆಗೆ ಭೇಟಿ ಮಾಡಬೇಕಾಗಿರುತ್ತದೆ.

ಗಂಟೋನೀಯಲ್ ಡಯಾಲಿಸಿಸ್‌ (FD) ಒಂದು ಸುಲಭವಾಗಿ ಮಾಡಬಹುದಾದ ಮತ್ತು ರೋಗಿಗಳಿಗೆ ಅನುಕೂಲಕರವಾದ ಪರ್ಯಾಯ ಚಿಕಿತ್ಸೆ ವಿಭಾಗವಾಗಿರುತ್ತದೆ. ಸದರಿ ವೆರಿಟೋನೀಯಲ್ ಡಯಾಲಿಸಿಸ್ (PD) ಅನ್ನು ಮನೆಯಲ್ಲಿಯ ಚಿಕಿತ್ಸೆ ನಡೆಸಲು ಸಾಧ್ಯವಾಗುವುದರಿಂದ ಆಸ್ಪತ್ರೆಗೆ ಭೇಟಿನೀಡುವ ಅವಶ್ಯಕತೆ ಕಡಿಮೆಯಾಗುತ್ತದೆ.

ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್‌ ಕಾರ್ಯಕ್ರಮದಡಿಯಲ್ಲಿ (PMNDP) ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹಿಮಡಯಾಲಿಸಿಸ್ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ.

ಪ್ರಾರಂಭದಲ್ಲಿ 350 ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇವೆ ನೀಡಲಾಗುವುದು. ಪ್ರತೀ ಜಿಲ್ಲೆಗೆ ಅಂದಾಜು 10 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗುತ್ತದೆ. ರೋಗಿಗಳ ಆಯ್ಕೆಯನ್ನು ನೆಫಾಲಜಿಸ್ಟ್ ರ ಮೂಲಕ ಮಾಡಲಾಗುವುದು, ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇಷನ್ ಸೇರಿದಂತೆ ಪ್ರತಿರೋಗಿಗೆ ರೂ. 13,000-00 ಗಳು ವೆಚ್ಚವಾಗಲಿದೆ ಎಂಬುದಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ (PMNDP) ಮಾರ್ಗಸೂಚಿ ಪ್ರಕಾರ ಅಂದಾಜಿಸಲಾಗಿದೆ, ಈ ವೆಚ್ಚವನ್ನು SAST ವತಿಯಿಂದ ABAK ಯೋಜನೆಯಡಿಯಲ್ಲಿ ನೀಡಲಾಗುವುದು.

ಇದನ್ನೂ ಓದಿ:MLA Pension : ರಾಜ್ಯದ ಮಾಜಿ ಶಾಸಕರಿಗೆ, ದಿವಂಗತರಾದ MLA ಕುಟುಂಬದವರಿಗೆ ಸರ್ಕಾರ ನೀಡೋ ಸವಲತ್ತೆನು ಗೊತ್ತಾ?

ಪ್ರತಿರೋಗಿಗೆ ತಿಂಗಳಿಗೆ 90 ರಿಂದ 120 ಪೆರಿಟೋನಿಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳು ಅವಶ್ಯಕತೆ ಇದ್ದು, ಸದರಿ ಪರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲಾಗುವುದು. ಇದಕ್ಕೆ ಬೇಕಾಗಿರುವ ಅನುದಾನವನ್ನು PMNDP ಲೆಕ್ಕಶೀರ್ಷಿಕೆಯಾದ 2210-03-110-0-08 (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಅಡಿಯಲ್ಲಿ ಒದಗಿಸಲಾಗುವುದು.