ಧರ್ಮಸ್ಥಳ: ಬಂಗ್ಲೆ ಗುಡ್ಡೆಯ ಹಿತ್ತಲಲ್ಲಿ ಮಗುವಿನದ್ದೂ ಸೇರಿ ರಾಶಿ ರಾಶಿ ಮಾನವ ಆಸ್ತಿ ಪಂಜರ – ಭೀಕರ ದೃಶ್ಯ ಬಿಚ್ಚಿಟ್ಟ ವಿಠಲ ಗೌಡ

ಧರ್ಮಸ್ಥಳ: ಬಂಗ್ಲೆ ಗುಡ್ಡೆಯಲ್ಲಿ ರಾಶಿ ರಾಶಿ ಅಸ್ಪಿಪಂಜರಗಳು ಪತ್ತೆಯಾಗಿ ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಕೆಲವೇ ದಿನಗಳ ಕೆಳಗೆ SIT ಯು ಸೌಜನ್ಯ ಹೋರಾಟಗಾರರೂ, ಸೌಜನ್ಯ ಸ್ವಂತ ಮಾವನೂ ಆಗಿರುವ ವಿಠಲ ಗೌಡರನ್ನು SIT ವಶಕ್ಕೆ ತೆಗೆದುಕೊಂಡಿತ್ತು. ಅಲ್ಲಿ ವಿಚಾರಣೆ ನಡೆದ ನಂತರ ಅವರನ್ನು ಬಿಟ್ಟು ಕೂಡಾ ಕಳಿಸಿತ್ತು. ಅದರ ಬೆನ್ನಲ್ಲೆ ಬಂಗ್ಲೆ ಗುಡ್ಡೆಯಲ್ಲಿ ಮಹಾಜರು ವೇಳೆ ನಡೆದ ಘಟನೆಯನ್ನು ವಿಠಲ ಗೌಡರು ವಿವರಿಸಿದ್ದಾರೆ. ಅಲ್ಲಿ ರಾಶಿ ರಾಶಿ ಅಸ್ತಿಪಂಜರಗಳನ್ನು ತಾವು ಕಂಡಿದ್ದಾಗಿ ಹೇಳಿದ್ದು ಇದೀಗ ಆತಂಕ ಸೃಷ್ಟಿಸಿದೆ.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಬುರುಡೆ ಹಸ್ತಾಂತರ ಮಾಡಿದ್ದು ಇದೆ ವಿಠಲ ಗೌಡ ಎಂದು ನಂಬಲಾಗಿದೆ. ವಿಠಲ್ ಗೌಡರನ್ನು ಸ್ಥಳ ಮಹಜರಿಗಾಗಿ ಎಸ್ಐಟಿ ಎರಡು ಬಾರಿ ತಂಡ ಬಂಗ್ಲೆಗುಡ್ಡೆಗೆ ಕರೆದೊಯ್ದಿತ್ತು. ಆಮೇಲೆ ತಾವು ಮತ್ತು ಎಸ್ಐಟಿ ಅಲ್ಲಿ ನಾಲ್ಕೈದು ಮಾನವ ಅಸ್ತಿಪಂಜರಗಳನ್ನು ಕಂಡಿದ್ದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ ಅಲ್ಲಿ ಒಂದು ಮಗುವನ್ನು ಹೋಲುವ ಅಸ್ತಿ ಪಂಜರ ಕೂಡ ಇತ್ತು ಎಂದಿದ್ದಾರೆ.
ಜತೆಗೆ ವಾಮಾಚಾರಕ್ಕೆ ಬಳಸಿದ ಹಾಗೆ ಕಾಣುವ ಕಲಶ ಇತ್ಯಾದಿ ಪರಿಕರಗಳು ಅಲ್ಲಿ ಪತ್ತೆಯಾದ ಬಗ್ಗೆ ಅವರು ವಿವರಿಸಿದರು. ಅಲ್ಲದೆ, ಈ ಪ್ರದೇಶದಲ್ಲಿ ಒಂದಷ್ಟು ಅಭಿವೃದ್ದಿ ಕಾರ್ಯವೇ ಅಥವಾ ಅಸ್ತಿಪಂಜರ ಮುಚ್ಚಿ ಹಾಕುವ ಪ್ರಕ್ರಿಯೆ ನಡೆದ ಸುಳಿವು ನೀಡುವ ಅಂಶಗಳು ಅಲ್ಲಿನ ಮಣ್ಣಿನಲ್ಲಿ ಗೋಚರಿಸುತ್ತಿವೆ ಎಂದಿದ್ದಾರೆ ವಿಠಲ ಗೌಡ.
ಈ ಸಂದರ್ಭ ಮಾತನಾಡಿರುವ ವಿಠಲ ಗೌಡರು, ನೂರಾರು ಶವ ಹೂತಿದ್ದಾಗಿ ಹೇಳಿಕೆ ನೀಡಿರುವ ಚಿನ್ನಯ್ಯ ಹೇಳಿರೋದೆಲ್ಲ ಸತ್ಯ. ಧರ್ಮಸ್ಥಳದ ಕಾಡಿನಲ್ಲಿ ಅವೆಲ್ಲ ನಡೆದಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
Comments are closed.