Arun Kumar Puttila: ‘ನೀವೆಲ್ಲರೂ ಮಾತು ಮರೆತಿದ್ದೀರಿ..’- ಬಿಜೆಪಿಗರಿಗೆ ಅರುಣ್ ಕುಮಾರ್ ಪುತ್ತಿಲ್ಲ ಖಡಕ್ ಎಚ್ಚರಿಕೆ

Share the Article

Arun Kumar Puttila : ತನ್ನದೇ ಪುತ್ತಲ ಪರಿವಾರವನ್ನು ಕಟ್ಟಿಕೊಂಡು, ಕರಾವಳಿಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿ ಕೊನೆಗೆ ರಾಜಕೀಯ ನಾಯಕರ ಸುಳಿಯಲ್ಲಿ ಸಿಲುಕಿ ಬಿಜೆಪಿ ಸೇರಿದ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ಅವರು ಇದೀಗ ಬಿಜೆಪಿ ನಾಯಕರಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿಯನ್ನು ಒಂದು ಹಂತಕ್ಕೆ ಮಣಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ನಾಯಕರು ಕಟ್ಟುಹಾಕಿ, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ನಂಬಿಸಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಗ ಪುತ್ತಿಲ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದರು. ಆದರೆ ಅದು ಇದುವರೆಗೆ ಈಡೇರಿಲ್ಲ ಎನ್ನುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ;Bhatkala: ಭಟ್ಕಳ ಅರಣ್ಯದಲ್ಲಿ ಗೋವುಗಳ ನರಮೇಧ? ನೂರಾರು ಹಸುಗಳ ಎಲುಬುಗಳು ಪತ್ತೆ, ಪೊಲೀಸರಿಂದ ತನಿಖೆ

ಹೀಗಾಗಿ ತಮ್ಮ ಬೆಂಬಲಿಗರೊಡನೆ ಸಭೆ ನಡೆಸಿದ ಬಳಿಕ ಬಹಿರಂಗ ಎಚ್ಚರಿಕೆ ನೀಡಿರುವ ಅವರು ‘ನಾಯಕರು ಎಚ್ಚೆತ್ತುಕೊಂಡರೆ ಒಳಿತು. ಇಲ್ಲದಿದ್ದರೆ ಮುಂದೆ ಡ್ಯಾಮೇಜ್ ಕಂಟ್ರೋಲ್ ಮಾಡಲು ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಮತ್ತೆ ಮೊದ್ಲಿನ ರೀತಿಯೇ ಅವ ಅರುಣ ಯಾರು ಅವನೊಂದಿಗಿರುವವರು ನಾಲ್ಕು ಜನ ವೋಟ್ ಹಾಕ್ಯಾರು ಎಂದು ಕಳೆದ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೇಳಿಕೊಂಡು ಹೋಗಿ ನಾಚಿಗೆ ಕೆಟ ಹಾಗೆ ಆಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.

Comments are closed.