Oil import: ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದರೆ ಸ್ಥಿತಿ ಏನಾಗಬಹುದು? ಪೆಟ್ರೋಲ್- ಡೀಸೆಲ್ ಬೆಲೆ ಏರುತ್ತೋ, ಇಳಿಯುತ್ತೋ?

Share the Article

Oil import: ಭಾರತವು 2022ರಿಂದ ರಷ್ಯಾದೊಂದಿಗೆ ತೈಲ ಒಪ್ಪಂದ ಮಾಡಿಕೊಂಡು, ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತಕ್ಕೆ ತೈಲ ಪೂರೈಸುವಲ್ಲಿ ರಷ್ಯಾ ದೇಶದ್ದೇ ಸಿಂಹ ಪಾಲು. ಆದರೆ ಇದು ಇದೀಗ ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರತ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸಿ ಭಾರತದ ಮೇಲೆ 50 ಶೇಕಡದಷ್ಟು ಸುಂಕವನ್ನು ಕೂಡ ಹೇರಿದ್ದಾರೆ. ಆದರೆ ಭಾರತ ಇದು ಯಾವುದಕ್ಕೂ ಸೊಪ್ಪು ಹಾಕದೆ ರಷ್ಯಾದೊಂದಿಗಿನ ತನ್ನ ಸಂಬಂಧವನ್ನು ಮುಂದುವರಿಸುತ್ತಿದೆ.

ಒಂದು ವೇಳೆ ಭಾರತವೇನಾದರೂ ಅಮೇರಿಕಾದ ಮಾತು ಕೇಳಿಕೊಂಡು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿದರೆ ಭಾರತದಲ್ಲಿನ ಸ್ಥಿತಿ ಏನಾಗಬಹುದು? ಭಾರತದಲ್ಲಿ ಪೆಟ್ರೋಲ್- ಡೀಸೆಲ್ ದರ ಎಷ್ಟಾಗಬಹುದು? ಎಂದು ದು ನೀವು ಎಂದಾದರೆ ಯೋಚಿಸಿದ್ದೀರಾ? ಹಾಗಾದರೆ ರಷ್ಯಾದಿಂದ ತೈಲ ಖರೀದಿ ನಿಂತರೆ, ಭಾರತದಲ್ಲಿ ಏನಾಗಬಹುದು ಎಂದು ತಿಳಿಯೋಣ ಬನ್ನಿ.

ಒಂದೊಮ್ಮೆ ರಷ್ಯಾದಿಂದ ತೈಲ ಆಮದು ನಿಲ್ಲಿಸಿದರೆ ಭಾರತವು ಇತರ ದೇಶಗಳಿಂದ ದುಬಾರಿ ಬೆಲೆಗೆ ತೈಲ ಖರೀದಿಸಬೇಕಾಗುತ್ತದೆ. ಇದರಿಂದ ನೇರವಾಗಿ ಆಮದು ವೆಚ್ಚ ಹೆಚ್ಚಲಿದೆ ಎಂದು ಎಸ್‌ಬಿಐ ವರದಿ ಹೇಳಿದೆ. ಅಷ್ಟೇ ಅಲ್ಲದೆ, ವಿಶ್ವದ ಒಟ್ಟು ಕಚ್ಚಾ ತೈಲ ಪೂರೈಕೆಯ ಶೇ. 10ರಷ್ಟನ್ನು ಹೊಂದಿರುವ ರಷ್ಯಾದಿಂದ ಎಲ್ಲಾ ದೇಶಗಳೂ ಒಂದೊಮ್ಮೆ ತೈಲ ಖರೀದಿಯನ್ನು ನಿಲ್ಲಿಸಿದರೆ, ಜಾಗತಿಕ ತೈಲ ಬೆಲೆಗಳು ಕೂಡ ಸುಮಾರು ಶೇ. 10ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ:Nepal: ಭಾರತದಿಂದಲೇ ತೈಲ ಖರೀದಿಸುತ್ತೆ ನೇಪಾಳ – ಆದ್ರೂ ಅಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ತುಂಬಾ ಕಡಿಮೆ ಯಾಕೆ!!

ಇದರ ಪರಿಣಾಮವನ್ನು ತಗ್ಗಿಸಲು ಭಾರತವು ಈಗಾಗಲೇ ತನ್ನ ತೈಲ ಆಮದು ಮೂಲಗಳನ್ನು ಸುಮಾರು 40 ದೇಶಗಳಿಗೆ ವಿಸ್ತರಿಸಿದೆ. ಇದರಲ್ಲಿ ಗಯಾನಾ, ಬ್ರೆಜಿಲ್ ಮತ್ತು ಕೆನಡಾದಂತಹ ಹೊಸ ಪೂರೈಕೆದಾರ ದೇಶಗಳು ಸೇರಿಕೊಂಡಿವೆ. ಹೀಗಿದ್ದೂ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿನ ಯಾವುದೇ ಏರಿಕೆಯಾದಲ್ಲಿ ಭಾರತದ ಇಂಧನ ವೆಚ್ಚದ ಮೇಲೆ ಒತ್ತಡ ಉಂಟಾಗಲಿದೆ ಎಂದು ಎಸ್‌ಬಿಐ ವರದಿಯು ಎಚ್ಚರಿಸಿದೆ.

Comments are closed.