G Parameshwar: ABVP ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ

Share the Article

G Parameshwar: ನಾನು ಯಾವುದೇ ʼಎಬಿವಿಪಿʼ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

“ದಾರಿಯಲ್ಲಿ ರಾಣಿ ಅಬ್ಬಕ್ಕ ಮೆರವಣಿಗೆ ಬರುತ್ತಿತ್ತು. ಹೂ ಹಾಕಿ ಹೋಗಿ ಅಂದ್ರು, ನಾನು ಹಾಕಿ ಬಂದೆ. ಇದನ್ನು ವಿವಾದ ಮಾಡೋದು ಬೇಡ, ನಾನು ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:Kerala: ಕೇರಳದಲ್ಲಿ ‘ಕಾಂತರಾ ಚಾಪ್ಟರ್- 1’ ಬ್ಯಾನ್?!

ಎಬಿವಿಪಿ ನಡೆಸುತ್ತಿದ್ದ ರಾಣಿ ಅಬ್ಬಕ್ಕದೇವಿಯ ಕಾರ್ಯಕ್ರಮವು ತುಮಕೂರಿನ ತಿಪಟೂರಿನಲ್ಲಿ ನಡೆಯುತ್ತಿತ್ತು. ಆ ಮೆರವಣಿಗೆಯಲ್ಲಿ ಗೃಹ ಸಚಿವ ಪರಮೇಶ್ವರ್‌ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್‌ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Comments are closed.