GST ಕಡಿತ ಬೆನ್ನಲ್ಲೇ ಸ್ಪ್ಲೆಂಡರ್ ಸೇರಿ ವಿವಿಧ ಬೈಕ್ ಗಳ ಬೆಲೆಯಲ್ಲಿ ಭಾರೀ ಇಳಿಕೆ- ಇಲ್ಲಿದೆ ಹೊಸ ದರದ ಪಟ್ಟಿ

Share the Article

GST: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಇಳಿಕೆಯ ಮೊತ್ತವನ್ನು ಘೋಷಿಸಿಕೊಳ್ಳುತ್ತೇವೆ. ಅಂತೆಯೇ ಇದೀಗ ವಿವಿಧ ಬೈಕ್ ಕಂಪನಿಗಳು ಕೂಡ ತಮ್ಮ ಇಳಿಕೆಯ ಮೊತ್ತವನ್ನು ಘೋಷಿಸಿಕೊಳ್ಳುತ್ತಿವೆ.

ಹೌದು, ಕೇಂದ್ರ ಸರ್ಕಾರವು 350 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿಮೆ ಮಾಡಿದೆ. ಇದರ ಪರಿಣಾಮ ಟೂ ವೀಲರ್ ಬೈಕ್ ಕೊಂಡುಕೊಳ್ಳಲು ಬಯಸಿದ್ದ ಅನೇಕ ಗ್ರಾಹಕರಿಗೆ ಸಾಕಷ್ಟು ಲಾಭವಾಗಲಿದೆ. ಹಾಗಿದ್ರೆ ಯಾವ ಬೈಕ್ ಎಷ್ಟು ಕಡಿಮೆ ಆಗಿದೆ ಎಂದು ತಿಳಿಯೋಣ ಬನ್ನಿ.

ಇದನ್ನೂ ಓದಿ:Kerala: ಕೇರಳದಲ್ಲಿ ‘ಕಾಂತರಾ ಚಾಪ್ಟರ್- 1’ ಬ್ಯಾನ್?!

ಯಾವುದಕ್ಕೆ ಎಷ್ಟು?

ಡೆಸ್ಟಿನಿ 125 – ರೂ.7,197

ಗ್ಲಾಮರ್ ಎಕ್ಸ್ – ರೂ.7,813

ಡಿಲಕ್ಸ್ – ರೂ.5,805

ಕರಿಜ್ಮಾ 210 – ರೂ.15,743

ಪ್ಯಾಶನ್ ಪ್ಲಸ್ – ರೂ.6,500

ಪ್ಲೆಷರ್ ಪ್ಲಸ್ – ರೂ.6,417

ಸ್ಪ್ಲೆಂಡರ್ ಪ್ಲಸ್ – ರೂ.6,820

ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ – ರೂ.7,254

ಜೂಮ್ 110 – ರೂ.6,597

ಜೂಮ್ 125 – ರೂ.7,291

ಜೂಮ್ 160 – ರೂ.11,602

ಎಕ್ಸ್‌ಟ್ರೀಮ್‌ 210 – ರೂ.14,516

ಎಕ್ಸ್‌ಟ್ರೀಮ್‌ 125ಆರ್ – ರೂ.8,010

ಎಕ್ಸ್‌ಟ್ರೀಮ್‌ 160ಆರ್ 4ವಿ – ರೂ.10,985

ಎಕ್ಸ್‌ಟ್ರೀಮ್‌ 250ಆರ್ – ರೂ.14,055

ಭಾರತೀಯ ಕುಟುಂಬಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ, ತಮ್ಮ ದಿನನಿತ್ಯದ ಅಗತ್ಯಗಳಿಗಾಗಿ ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಅವರಿಗೆ ಈ ಬೆಲೆ ಇಳಿಕೆಯು ಹೆಚ್ಚಿನ ಅನುಕೂಲವಾಗಲಿದೆ.

Comments are closed.