Delhi: ನಿಂಬೆ ಹಣ್ಣಿನ ಮೇಲೆ ಕಾರು ಹತ್ತಿಸಲು ಹೋಗಿ ಶೋ ರೂಮ್​​ಮೇಲಿಂದ ಕೆಳಗೆ ಬಿದ್ದ ಮಹಿಳೆ -ಖರೀದಿಸಿದ ಕೆಲವೇ ಹೊತ್ತಲ್ಲಿ ‘ಥಾರ್’ ಪುಡಿ ಪುಡಿ!!

Share the Article

Delhi: ನಿಂಬೆ ಹಣ್ಣಿನ ಮೇಲೆ ಹೊಸ ಥಾರ್ ಹತ್ತಿಸಲು ಹೋಗಿ ಶೂ ರೂಮ್ ನಿಂದ ಕಾರು ಸಮೇತ ಮಹಿಳೆ ಕೆಳಗೆ ಹಾರಿರುವ ವಿಚಿತ್ರ ಘಟನೆ ನಡೆದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಮಹಿಳೆಯೊಬ್ಬರು ಮಾನಿ ಪವಾರ್ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ, 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರನ್ನು ಖರೀದಿಸಿದರು. ಬಳಿಕ ಪೂಜೆ ಮಾಡಿ, ಶೋ ರೂಮ್ ​​ ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿ , ಮೊದಲ ಮಹಡಿಯ ಗಾಜು ಒಡೆದು ಗಾಡಿ ಸಮೇತ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಇದನ್ನೂ ಓದಿ:Terrorists Arrest: ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು, ಇಬ್ಬರು ಶಂಕಿತ ಐಎಸ್‌ಐಎಸ್‌ ಉಗ್ರರು ಬಂಧನ

ಮಹಿಳೆ ನಿಂಬೆ ಹಣ್ಣಿನ ಮೇಲೆ ಕಾರಿನ ಚಕ್ರ ಹಾಕಬೇಕಾಯಿತು, ಆದರೆ ಅವರು ಆಕ್ಸಿಲರೇಟರ್ ಅನ್ನು ತುಂಬಾ ಒತ್ತಿದರು. ಶೋರೂಂ ಉದ್ಯೋಗಿ ಕೂಡ ಕಾರಿನಲ್ಲಿ ಕುಳಿತಿದ್ದರು. ಆಕ್ಸಿಲರೇಟರ್ ಅನ್ನು ಹೆಚ್ಚು ಒತ್ತಿದ್ದರಿಂದ, ಕಾರು ಶೋರೂಂನ ಮೊದಲ ಮಹಡಿಯ ಗಾಜನ್ನು ಮುರಿದು ರಸ್ತೆಯ ಮೇಲೆ 15 ಅಡಿ ಕೆಳಗೆ ಬಿದ್ದಿದೆ. ಕಾರು ಬಿದ್ದ ತಕ್ಷಣ ಅದರ ಏರ್‌ಬ್ಯಾಗ್‌ಗಳು ತೆರೆದವು. ಅಪಘಾತದಲ್ಲಿ ಮಹಿಳೆ ಮತ್ತು ಉದ್ಯೋಗಿ ವಿಕಾಸ್ ಗಾಯಗೊಂಡಿದ್ದು, ಇಬ್ಬರನ್ನೂ ಹತ್ತಿರದ ಮಲಿಕ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.

Comments are closed.