Home News Indian Railway : ಭಾರತೀಯ ರೈಲ್ವೆಯಲ್ಲಿ ಬರೋಬ್ಬರಿ 32 ಸಾವಿರ ಹುದ್ದೆಗಳ ನೇಮಕಾತಿ – ಯಾವಾಗ...

Indian Railway : ಭಾರತೀಯ ರೈಲ್ವೆಯಲ್ಲಿ ಬರೋಬ್ಬರಿ 32 ಸಾವಿರ ಹುದ್ದೆಗಳ ನೇಮಕಾತಿ – ಯಾವಾಗ ಪರೀಕ್ಷೆ?

Hindu neighbor gifts plot of land

Hindu neighbour gifts land to Muslim journalist

Indian Railway : ಭಾರತೀಯ ರೈಲ್ವೆ ಇಲಾಖೆಯ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳ ನೇಮಕಾತಿಯನ್ನು ಮಾಡಲು ಮುಂದಾಗಿದ್ದು, ಬರೋಬ್ಬರಿ 32 ಸಾವಿರ 438 ಗ್ರೂಪ್-ಡಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆಯಾಗಿದೆ.

ಹೌದು, ರೈಲ್ವೆ ನೇಮಕಾತಿ ಮಂಡಳಿ (RRB) ವಿವಿಧ ಇಲಾಖೆಗಳಲ್ಲಿ 32,438 ಲೆವೆಲ್-1 ಹುದ್ದೆಗಳನ್ನ ಭರ್ತಿ ಮಾಡಲು CEN 08/2024ರ ಅಡಿಯಲ್ಲಿ RRB ಗ್ರೂಪ್ D ಪರೀಕ್ಷೆ 2025ನ್ನು ನಡೆಸಲಿದೆ. ಈ ಹುದ್ದೆಗಳಿಗೆ ಪರೀಕ್ಷಾ ದಿನಾಂಕ ಬಂದಿದ್ದು, ನವೆಂಬರ್ 17ರಿಂದ ಡಿಸೆಂಬರ್ ಅಂತ್ಯದವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನ ಆನ್‌ಲೈನ್‌’ನಲ್ಲಿ ನಡೆಸಲಾಗುತ್ತದೆ ಎಂದು ಇಲಾಖೆಯು ತಿಳಿಸಿದೆ.

ಇದನ್ನೂ ಓದಿ:Nepal: ನೇಪಾಳದ ಮುಂದಿನ ಪಿಎಂ ಆಗ್ತಾರಾ ಯುವ ನಾಯಕ, ಬೆಳಗಾವಿ VTU ಈ ಹಳೆ ವಿದ್ಯಾರ್ಥಿ?

ಅಂದಹಾಗೆ ನಿರ್ವಹಣೆ, ಪಾಯಿಂಟ್‌ಸ್‌ಮನ್, ಲೋಕೋ ಶೆಡ್, ಕಾರ್ಯಾಚರಣೆಗಳು, ಟ್ರಾಕ್ಷನ್ ಮತ್ತು ಲಗೇಜ್ (TL), ಹವಾನಿಯಂತ್ರಣ (AC) ವಿಭಾಗಗಳಲ್ಲಿ ಸಹಾಯಕರಂತಹ ಹುದ್ದೆಗಳಿವೆ. ಇವುಗಳ ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ, ಇದನ್ನು ತಾತ್ಕಾಲಿಕವಾಗಿ ನವೆಂಬರ್ 17ರಿಂದ ಡಿಸೆಂಬರ್ 2025ರ ಅಂತ್ಯದವರೆಗೆ ನಿಗದಿಪಡಿಸಲಾಗಿದೆ. ಇದರ ನಂತರ ದೈಹಿಕ ದಕ್ಷತೆ ಪರೀಕ್ಷೆ (PET), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ನವೀಕರಣಗಳಿಗಾಗಿ ಕಾಲಕಾಲಕ್ಕೆ ಅಧಿಕೃತ ವೆಬ್‌ಸೈಟ್ ಅನುಸರಿಸಬೇಕಾಗುತ್ತದೆ ಎಂದು ಇಲಾಖೆ ತಿಳಿಸಿದೆ.