Gold Price : 1.12 ಲಕ್ಷ ರೂ ತಲುಪಿದ 10.ಗ್ರಾಂ ಚಿನ್ನ- ಒಂದೇ ದಿನ 5080 ರೂ. ಏರಿಕೆ!!

Gold Price : ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಚಿನ್ನದ ದರದಲ್ಲಿ ಇಳಿಕೆಯಾಗುತ್ತದೆ ಎಂದು ಗ್ರಾಹಕರು ನಿರೀಕ್ಷೆ ಮಾಡಿದ್ದರು. ಆದರೆ ಇದೀಗ ದಿನದಿಂದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ ಬಂಗಾರದ ಬೆಲೆ ರೂ.5,080 ಏರಿಕೆ ಕಂಡಿದ್ದು ಹತ್ತು ಗ್ರಾಂ ಚಿನ್ನದ ಬೆಲೆ 1.12 ಲಕ್ಷ ರೂ ತಲುಪಿದೆ.

ಹೌದು, ಸೋಮವಾರದಂದು ದೆಹಲಿಯಲ್ಲಿ 10 ಗ್ರಾಂ ಚಿನ್ನಕ್ಕೆ 1,07,670 ರೂ. ಆಗಿತ್ತು. ವಿಶ್ವ ಮಾರುಕಟ್ಟೆಯಲ್ಲಿಯೂ ಸಾರ್ವಕಾಲಿಕ ಗರಿಷ್ಠಕ್ಕೆ ತಲುಪಿರುವ ಚಿನ್ನ 28.3 ಗ್ರಾಂ (1 ಔನ್ಸ್) ಗೆ 3,22,646 ರೂ. (3,659.27 ಡಾಲರ್)ಗೆ ತಲುಪಿದೆ.
ಇದನ್ನೂ ಓದಿ:Indian Railway : ಭಾರತೀಯ ರೈಲ್ವೆಯಲ್ಲಿ ಬರೋಬ್ಬರಿ 32 ಸಾವಿರ ಹುದ್ದೆಗಳ ನೇಮಕಾತಿ – ಯಾವಾಗ ಪರೀಕ್ಷೆ?
ಇನ್ನು ಇತ್ತ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನಕ್ಕೆ 1,360 ರೂ. ಏರಿಕೆಯಾಗಿ 1,10,290 ರೂ. ಆಗಿದೆ. ಸೋಮವಾರದಂದು 10 ಗ್ರಾಂ ಚಿನ್ನ 1,08,930 ರೂ. ಇತ್ತು. ಅಂದಹಾಗೆ 2024ರ ಡಿ. 31ರಲ್ಲಿ 10 ಗ್ರಾಂ ಚಿನ್ನಕ್ಕೆ 78,950 ರೂ. ಇತ್ತು. ಈ ಬೆಲೆಯು ಈ ವರ್ಷ ಶೇ.43ರಷ್ಟು ಅಂದರೆ 33,800 ರೂ. ಏರಿಕೆ ಕಂಡಿದ್ದು ಚಿನ್ನ ಕೊಳ್ಳುವರನ್ನು ತಲೆ ಕೆಡಿಸಿದೆ.
Comments are closed.