Hockey: ಹಾಕಿ ಏಷ್ಯಾ ಕಪ್ -ದಕ್ಷಿಣ ಕೊರಿಯಾ ಮಣಿಸಿ ಏಷ್ಯಾ ಕಪ್ ಗೆದ್ದ ಭಾರತ ತಂಡ

Share the Article

Hockey: ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್​ನಲ್ಲಿ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.

ಹೌದು, 2025 ರ ಹಾಕಿ ಏಷ್ಯಾ ಕಪ್ ಆವೃತ್ತಿಯಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸುವ ಮೂಲಕ ಹರ್ಮನ್​​ಪ್ರೀತ್ ಸಿಂಗ್ (Harmanpreet Singh) ನಾಯಕತ್ವದ ಭಾರತ ಪುರುಷರ ಹಾಕಿ ತಂಡ ಭಾನುವಾರ ನಾಲ್ಕನೇ ಬಾರಿಗೆ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ. ಈ ಮೂಲಕ 2026ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ:Viral Video : ‘ಓಯೋ’ ಸಿಗಲಿಲ್ಲವೆಂದು ರೈಲಿನಲ್ಲೇ ಆಟ ಶುರು ಮಾಡಿಕೊಂಡ ಜೋಡಿಗಳು – ವಿಡಿಯೋ ವೈರಲ್

ಭಾರತದ ಪಾಲಿಗೆ ಇದು ನಾಲ್ಕನೇ ಚಾಂಪಿಯನ್ ಶಿಪ್ ಆಗಿದೆ. ಈ ಮೂಲಕ ಅತೀ ಹೆಚ್ಚು ಬಾರಿ ಏಷ್ಯಾ ಕಪ್ ಗೆದ್ದ ತಂಡಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕೊನೆಯ ಬಾರಿಗೆ 2017 ರಲ್ಲಿ ಢಾಕಾದಲ್ಲಿ ಭಾರತ ಏಷ್ಯಾ ಕಪ್ ಹಾಕಿ ಗೆದ್ದುಕೊಂಡಿತ್ತು. ಇದೀಗ ಬರೋಬ್ಬರಿ 8 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆಗಿದೆ.

Comments are closed.