Hardhik Pandya: ಎಲ್ಲರ ಕಣ್ಣು ಹಾರ್ದಿಕ್ ಪಾಂಡ್ಯ ವಾಚಿನ ಮೇಲೆ – ಪಾಕ್ ತಂಡದ ವಾರ್ಷಿಕ ವೇತನಕ್ಕಿಂತ ಹೆಚ್ಚು ಇದರ ಬೆಲೆ!!

Share the Article

Hardhik Pandya : ಸೆಪ್ಟೆಂಬರ್ 9 ರಿಂದ ಏಷ್ಯಾ ಕಪ್ ಆರಂಭವಾಗುವ ಕಾರಣ ಇದೀಗ ಭಾರತದ ತಂಡ ಅಭ್ಯಾಸದಲ್ಲಿ ನಿರತವಾಗಿದೆ. ಈ ವೇಳೆ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈಗಡಿಯಾರ ಚರ್ಚೆಯ ವಿಷಯವಾಗಿದೆ. ಯಾಕೆಂದರೆ ಅದರ ಬೆಲೆ ಎಲ್ಲರನ್ನು ದಂಗಾಗಿಸುವಂತಿದೆ.

ಹೌದು, ಹಾರ್ದಿಕ್ ಪಾಂಡ್ಯ ರಿಚರ್ಡ್ ಮಿಲ್ಲೆ RM 27-04 ಕೈಗಡಿಯಾರವನ್ನು ಧರಿಸಿದ್ದಾರೆ. ಈ ವಾಚ್ ಬೆಲೆ ಎಷ್ಟು ದುಬಾರಿಯೆಂದರೆ, ಏಷ್ಯಾಕಪ್‌ಗೆ ಆಯ್ಕೆಯಾದ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೂ ಅದು ಇನ್ನೂ ಕಡಿಮೆಯಾಗುತ್ತದೆ. ವರದಿಯ ಪ್ರಕಾರ ಅದರ ಮಾರುಕಟ್ಟೆ ಬೆಲೆ 20 ಕೋಟಿ ರೂ.!!

ಇದನ್ನೂ ಓದಿ:Hockey: ಹಾಕಿ ಏಷ್ಯಾ ಕಪ್ -ದಕ್ಷಿಣ ಕೊರಿಯಾ ಮಣಿಸಿ ಏಷ್ಯಾ ಕಪ್ ಗೆದ್ದ ಭಾರತ ತಂಡ

ಇನ್ನು ಏಷ್ಯಾಕಪ್​ಗೆ ಆಯ್ಕೆಯಾಗಿರುವ ಪಾಕಿಸ್ತಾನದ 17 ಆಟಗಾರರ ವೇತನ ಎಷ್ಟು ಎಂಬುದನ್ನು ನೋಡುವುದಾದರೆ ಎಲ್ಲಾ 17 ಪಾಕಿಸ್ತಾನಿ ಆಟಗಾರರ ವಾರ್ಷಿಕ ವೇತನವನ್ನು ಸೇರಿಸಿದರೆ, ಆ ಮೊತ್ತವು ಭಾರತೀಯ ಕರೆನ್ಸಿಯಲ್ಲಿ 19.34 ಕೋಟಿ ರೂ. ಆಗುತ್ತದೆ. ಈ ಮೊತ್ತವು ಹಾರ್ದಿಕ್ ಪಾಂಡ್ಯ ಅವರ ಕೈಗಡಿಯಾರದ ಬೆಲೆಗಿಂತ ಕಡಿಮೆ ಇದೆ. ಮೇಲೆ ಹೇಳಿದಂತೆ ಹಾರ್ದಿಕ್ ಅವರ ವಾಚ್​ನ ಮಾರುಕಟ್ಟೆ ಬೆಲೆ 20 ಕೋಟಿ ರೂ. ಆಗಿದೆ.

Comments are closed.