Dasara: ಮೈಸೂರು ದಸರಾ: ಜಂಬೂಸವಾರಿ ಟಿಕೆಟ್‌, ಗೋಲ್ಡ್‌ಕಾರ್ಡ್ ಟಿಕೆಟ್ ಆರಂಭ: ಟಿಕೆಟ್ ಬೆಲೆ ಇಲ್ಲಿದೆ

Share the Article

Dasara: 2025ನೇ ಸಾಲಿನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ (Dasara) ಮಹೋತ್ಸವವನ್ನು ಸೆ.22 ರಿಂದ ಅ.2 ರವರೆಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತೆಯೇ ನಾಡಹಬ್ಬ ಮೈಸೂರು ದಸರಾ-2025ರ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ ₹1500 ನಿಗದಿ ಮಾಡಲಾಗಿದೆ.

ಇದನ್ನೂ ಓದಿ:GST : ಹೈನುಗಾರಿಕೆ, ಕೃಷಿ ಉತ್ಪನ್ನಗಳ ಮೇಲೂ GST ಕಡಿತ- ಬರೋಬ್ಬರಿ 10 ಕೋಟಿ ರೈತರಿಗೆ ಲಾಭ

ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳ ಮಾರಾಟ ಆರಂಭವಾಗಿದೆ. ಸಾರ್ವಜನಿಕರಿಗೆ ದಸರಾ ಗೋಲ್ಡ್‌ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಮೈಸೂರು ದಸರಾ ಅಧಿಕೃತ ಜಾಲತಾಣ https://mysoredasara.gov.in/ ಮೂಲಕ ಖರೀದಿಸಬಹುದಾಗಿದೆ.

Comments are closed.