Mahindra : GST ಕಡಿತ ಬೆನ್ನಲ್ಲೇ ಮಹಿಂದ್ರಾ ಥಾರ್ ಬೆಲೆಯಲ್ಲಿ ಭಾರಿ ಇಳಿಕೆ – ಹೊಸ ಬೆಲೆ ಸೆ. 22 ರಿಂದಲ್ಲ 6 ರಿಂದಲೇ ಜಾರಿ !!

Share the Article

Mahindra: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಾರು ಕಂಪನಿಗಳು ತಮ್ಮ ಇಳಿಕೆಯ ಮೊತ್ತವನ್ನು ಘೋಷಿಸಿಕೊಳ್ಳುತ್ತೇವೆ. ಅಂತೆಯೇ ಇದೀಗ ಮಹೀಂದ್ರಾ ( Mahindra & Mahindra ) ಕಂಪನಿಯು ತಮ್ಮ ವಾಹನಗಳ ಬೆಲೆಯನ್ನು ಕಡಿಮೆ ಮಾಡುವ ಬಗ್ಗೆ ಮಾಹಿತಿ ನೀಡಿದೆ.

ಹೌದು, ಮಹೀಂದ್ರಾ & ಮಹೀಂದ್ರಾ ಇತ್ತೀಚಿನ ಜಿಎಸ್‌ಟಿ ಕಡಿತದ ಸಂಪೂರ್ಣ ಲಾಭವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸುವುದಾಗಿ ಘೋಷಿಸಿದೆ. ಎಲ್ಲಾ ಮಹೀಂದ್ರಾ ಐಸಿಇ (ಪೆಟ್ರೋಲ್/ಡೀಸೆಲ್) ಎಸ್‌ಯುವಿಗಳ ಬೆಲೆಗಳನ್ನು ಸೆಪ್ಟೆಂಬರ್ 6, 2025 ರಿಂದ ಕಡಿಮೆ ಮಾಡಲಾಗಿದೆ. ಗ್ರಾಹಕರು ಈಗ ಈ ವಾಹನಗಳ ಮೇಲೆ ₹ 1.56 ಲಕ್ಷದವರೆಗೆ ಉಳಿಸಬಹುದು.

ಇದನ್ನೂ ಓದಿ:PM Modi: ಸೆ.9ಕ್ಕೆ ಪ್ರವಾಹ ಪೀಡಿತ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ!

ವಿಶೇಷವೆಂದರೆ ಮಹೀಂದ್ರಾ ಕಾರುಗಳ ಬೆಲೆಯಲ್ಲಿನ ಕಡಿತವು ಸೆಪ್ಟೆಂಬರ್ 22 ರಿಂದ ಅಲ್ಲ, ಸೆಪ್ಟೆಂಬರ್ 6 ರಿಂದಲೇ ಜಾರಿಗೆ ಬಂದಿದೆ. ಹಾಗಾದರೆ ಯಾವ ಮಹೀಂದ್ರಾ ಕಾರಿನಲ್ಲಿ ಎಷ್ಟು ಉಳಿತಾಯ ಲಭ್ಯವಾಗುತ್ತದೆ ಎಂದು ನೋಡೋಣ.

Comments are closed.