GST ವ್ಯಾಪ್ತಿಗೆ ಪೆಟ್ರೋಲ್ – ಡೀಸೆಲ್ ಯಾಕೆ ಒಳ ಪಡಲ್ಲ? ನಿರ್ಮಲ ಸೀತಾರಾಮನ್ ಹೇಳಿದಿಷ್ಟು

Share the Article

GST: ಕೇಂದ್ರ ಸರ್ಕಾರವು ಇದೀಗ ಜಿಎಸ್ಟಿ ಸ್ಲಾಬ್ ಅನ್ನು ಪರಿಷ್ಕರಿಸಿ ದೇಶದ ಜನರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಇದರ ಬೆನ್ನಲ್ಲೇ ಅನೇಕ ವಸ್ತುಗಳು ಜಿಎಸ್‌ಟಿ ಮುಕ್ತವಾದರೆ, ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಇಷ್ಟೆಲ್ಲ ಬದಲಾವಣೆಗಳನ್ನು ತಂದ ಕೇಂದ್ರ ಸರ್ಕಾರ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಯಾಕೆ ತಂದಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ. ಇದಕ್ಕೆ ಮಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಪ್ರತಿಕ್ರಿಯಿಸಿದ್ದಾರೆ.

ಹೌದು, ಜಿಎಸ್‌ಟಿ ಪರಿಷ್ಕರಣೆ ಬಳಿಕ ವ್ಯಾಪಕ ಬದಲಾವಣೆಗಳ ಹೊರತಾಗಿಯೂ, ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್ಟಿಯ ಹೊರಗೆ ಉಳಿದಿವೆ. ಈ ಬಗ್ಗೆ ಸೀತಾರಾಮನ್ ವಿವರಣೆ ಪ್ರತಿಕ್ರಿಯಿಸಿದ್ದು “ನಾವು ಉದ್ದೇಶಪೂರ್ವಕವಾಗಿ ಈ ಪ್ರಸ್ತಾವನೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ್ನು ಸೇರಿಸಲಿಲ್ಲ. ಕಾನೂನುಬದ್ಧವಾಗಿ, ನಾವು ಸಿದ್ಧರಿದ್ದೇವೆ, ಆದರೆ ಈ ನಿರ್ಧಾರವು ರಾಜ್ಯಗಳಿಂದ ಬರಬೇಕು” ಎಂದು ಅವರು ಹೇಳಿದರು.

ಇದನ್ನೂ ಓದಿ:Indian Railway : ಮರದ ವಿಚಾರದಲ್ಲಿ ಯಾಮಾರಿ 1 ಕೋಟಿ ಕಳೆದುಕೊಂಡ ಭಾರತೀಯ ರೈಲ್ವೆ!!

ಅಲ್ಲದೆ ಪ್ರಸ್ತುತ, ಇಂಧನಕ್ಕೆ ಅಬಕಾರಿ ಸುಂಕ (ಕೇಂದ್ರದಿಂದ) ಮತ್ತು ವ್ಯಾಟ್ (ರಾಜ್ಯಗಳಿಂದ) ಮೂಲಕ ತೆರಿಗೆ ವಿಧಿಸಲಾಗುತ್ತದೆ. ಎರಡೂ ಸರ್ಕಾರಗಳು ಈ ಆದಾಯದ ಮೇಲೆ ಹೆಚ್ಚು ಅವಲಂಬಿತವಾಗಿವೆ, ಇದು ಜಿಎಸ್ಟಿಗೆ ಬದಲಾಯಿಸುವುದನ್ನು ಸೂಕ್ಷ್ಮ ಮತ್ತು ಸಂಕೀರ್ಣ ವಿಷಯವನ್ನಾಗಿ ಮಾಡುತ್ತದೆ. ಇದೀಗ ಇಂಧನವನ್ನು ಹೊರಗಿಡುವ ಮೂಲಕ, ಕೇಂದ್ರ ಅಥವಾ ರಾಜ್ಯ ಹಣಕಾಸುಗಳಿಗೆ ಅಡ್ಡಿಯಾಗದಂತೆ ಸರ್ಕಾರ ಖಚಿತಪಡಿಸುತ್ತದೆ ಎಂದಿದ್ದಾರೆ.

Comments are closed.