Ration Card: ಸತ್ತವರ ಹೆಸರಿನಲ್ಲೂ ರೇಷನ್ ಕಾರ್ಡ್ – ರಾಜ್ಯದಲ್ಲಿ ಅನರ್ಹ 12.68 ಲಕ್ಷ ಕುಟುಂಬಗಳು ಪತ್ತೆ

Share the Article

Ration Card: ಕರ್ನಾಟಕದಲ್ಲಿ ಪಡಿತರ ಚೀಟಿಗೆ ಅನರ್ಹರಾದ 12.68 ಲಕ್ಷ ಕುಟುಂಬಗಳು ಪತ್ತೆಯಾಗಿವೆ ಎಂದು ಆಹಾರ ಇಲಾಖೆಯ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ 1,446 ಪಡಿತರ ಚೀಟಿಗಳಿದ್ದು, ₹1.20 ಲಕ್ಷ ವಾರ್ಷಿಕ ಆದಾಯ ಮೀರಿದ 5,13,613 ಕುಟುಂಬಗಳು ಪತ್ತೆಯಾಗಿವೆ. ಬೇರೆ ರಾಜ್ಯಗಳ 57,864 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಲಾಗಿದ್ದು, ಅವರಲ್ಲಿ 73,859 ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. 6.16 ಲಕ್ಷ ಕುಟುಂಬಗಳು ಇನ್ನೂ ಕೆವೈಸಿ ಮಾಡಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಬಿಟ್ಟಿ ಸಿಗುತ್ತೆ ಅಂದ್ರೆ ನಂಗೂ ಇರ್ಲಿ, ನಮ್ಮರಿಗೂ ಇರ್ಲಿ ಅಂತಾರೆ. ಇಲ್ಲಿ ಆಗಿರೋದು ಅದೇ. ಸರ್ಕಾರಿ ಉದ್ಯೋದಲ್ಲಿರುವವರು, ಅಲ್ಲದೆ ರಾಷ್ಟ್ರೀಯ-ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಲಕ್ಷ ಲಕ್ಷ ಸಂಬಳ ಪಡೆಯುವವರು, ಹಾಗೆ ಆದಾಯ ತೆರಿಗೆ ಪಾವತಿಸುತ್ತಿರುವವರು ಹೀಗೆ ಮಾನದಂಡಗಳನ್ನು ಮೀರಿ ಉಳ್ಳ ಕುಟುಂಬದವರು ಪಡಿತರ ಚೀಟಿ ಮಾಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರು ನೀಡಿದ ಹಿನ್ನೆಯಲ್ಲಿ ಆಹಾರ ಇಲಾಖೆ ಸಮೀಕ್ಷೆ ನಡೆಸಿದೆ. ವರದಿ ಪ್ರಕಾರ 12 ವಿಭಾಗಗಳಲ್ಲಿ ಅನರ್ಹ ಪಡಿತರ ಚೀಟಿದಾರರ ಕುಟುಂಬಗಳನ್ನು ಗುರುತಿಸಿದೆ ಎಂದು ಪ್ರಜಾವಾಣಿ ಮಾಹಿತಿ ಲಭ್ಯವಾಗಿದೆ.

ಅಷ್ಟು ಮಾತ್ರವಲ್ಲದೆ ಹೊರ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಓಡಿಶಾ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿ ಕೆಲ ರಾಜ್ಯಗಳ ಬರೋಬ್ಬರಿ 57,864 ಕುಟುಂಬಗಳು ಪಡಿತರ ಚೀಟಿ ಪಡೆದಿವೆ. ಇದರಲ್ಲಿ ಪ್ರತಿ ತಿಂಗಳು 73,859 ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ, ಬೇಳೆ-ಕಾಳು ಪಡೆಯುತ್ತಾರೆ. ಮೃತರ ಹೆಸರಲ್ಲೂ 1,446 ಪಡಿತರ ಚೀಟಿಗಳಿದ್ದು, ಪ್ರತಿ ತಿಂಗಳು ಅವರ ಕುಟುಂಬದವರು, ಸಂಬಂಧವಿಲ್ಲದವರು ಸೇರಿದಂತೆ 1,452 ಮಂದಿ ಪಡಿತರ ದಿನಸಿಗಳನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ:Chamundeshwari Temple: ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

ಸುಮಾರು 2,684 ಕುಟುಂಬಗಳು, ವಾರ್ಷಿಕ ₹25 ಲಕ್ಷ ವಹಿವಾಟು ಮೀರಿ ವ್ಯವಹಾರ ನಡೆಸುತ್ತಿವೆ. 5,13,613 ಕುಟುಂಬಗಳದ್ದು ₹1.20 ಲಕ್ಷ ಆದಾಯ ಮೀರಿದೆ. ಅವರು ಪಡಿತರ ಚೀಟಿ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೆ ಪಿಎಂ ಕಿಸಾನ್ ಯೋನೆಯಡಿ ನೋಂದಾಯಿತ 7.5 ಎಕರೆ ಕೃಷಿ ಜಮೀನು ಹೊಂದಿದ 33,456 ಕುಟುಂಬಗಳು ಮತ್ತು 18 ವರ್ಷಕ್ಕಿಂತ ಕೆಳಗಿರುವ ಏಕ ಸದಸ್ಯರು ಇರುವ 731 ಕುಟುಂಬಗಳು ಪಡಿತರ ಚೀಟಿ ಬಳಸುತ್ತಿವೆ. 119 ಕುಟುಂಬಗಳು ಸ್ವಂತ ಬಳಕೆಗೆ ವಾಹನವನ್ನಿಟ್ಟಿದ್ದರೂ ಕೂಡ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಪಡೆದು, ಬಡವರಿಗಾಗಿ ಇರುವ ಪಡಿತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Comments are closed.