Karwar: ಏರ್‌ಗನ್ ಮಿಸ್‌ಫೈರ್ ಕೇಸ್ ರೋಚಕ ಟ್ವಿಸ್ಟ್: ಬಾಲಕನ ಸಾವಿಗೆ ತಮ್ಮ ಕಾರಣನಲ್ಲ

Karwar: ಶಿರಸಿಯ ಸೋಮನಹಳ್ಳಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಲಕ ಕೈಯಿಂದ ಏರ್‌ಗನ್ ಗುಂಡು ಹಾರಿ ಇನ್ನೋರ್ವ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ. ಬಾಲಕ ತನ್ನ ಅಣ್ಣನಿಗೆ ಗುಂಡು ಹಾರಿಸಿಲ್ಲ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿರುವ ಕುರಿತು ವರದಿಯಾಗಿದೆ.

ಕೇಶವ ಹೆಗಡೆ ಎನ್ನುವವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎನ್ನುವವರ ಇಬ್ಬರು ಮಕ್ಕಳು ಆಟವಾಡುತ್ತಿದ್ದು, ಆಗ ಏರ್ ಗನ್ ಫೈರ್ ಆಗಿ ದುರ್ಘಟನೆ ಸಂಭವಿಸಿತ್ತು ಎಂದು ವರದಿಯಾಗಿತ್ತು. ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮ ಆಕಸ್ಮಿಕವಾಗಿ ಗುಂಡು ಹಾರಿಸಿದ್ದ. ಹಾಗಾಗಿ ಅಣ್ಣ ಕರಿಯಪ್ಪ (9) ಮೃತಪಟ್ಟಿದ್ದ ಎಂದು ಹೇಳಲಾಗಿತ್ತು.
ಆದರೆ ಶಿರಸಿ ಗ್ರಾಮೀಣ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ನಿಜ ವಿಷಯ ತಿಳಿದು ಬಂದಿದೆ.
ಸಹೋದರನೋರ್ವನ ಕೈಯಿಂದ ಫೈರ್ ಆಗಿದ್ದಲ್ಲ. ಕೆಲಸಗಾರ ನಿತೀಶ್ ಗೌಡನ ಕೈನಿಂದ ಮಿಸ್ ಫೈರ್ ಆಗಿ ಬಾಲಕ ಸಾವು ಕಂಡಿರುವುದು ತಿಳಿದು ಬಂದಿದೆ. ಇಬ್ಬರು ಮಕ್ಕಳು ಏರ್‌ಗನ್ ಹಿಡಿದು ನಿತೀಶ್ ಗೌಡ ಬಳಿ ಬಂದಿದ್ದರು. ನಿತೀಶ್ ಗೌಡ ಅಂಗವಿಕಲನಾಗಿದ್ದು, ಈತನ ಎಡಗೈ ಊನವಾಗಿದ್ದು, ಮಕ್ಕಳ ಬಂದಾಗ ಗನ್ ಸರಿಸುವಾಗ ಎಡಕೈ ತಾಗಿ ಎದುರಿಗಿದ್ದ ಬಾಲಕ ಕರಿಯಪ್ಪನ ಎದೆಗೆ ಗುಂಡು ತಾಗಿದೆ.
ಇದನ್ನೂ ಓದಿ:Monkeys: ಮಲಗಿದ್ದ 2 ತಿಂಗಳ ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿದ ಕೋತಿಗಳು: ಮಗು ಸಾವು
ಎದೆಗೆ ಗುಂಡು ಹೊಕ್ಕು ಹೃದಯ ಸೀಳಿ ಬಾಲಕ ಸಾವಿಗೀಡಾಗಿದ್ದಾನೆ. ನಿತೀಶ್ ಗೌಡನಿಗೆ ಏರ್‌ಗನ್ ಬಳಸಲು ಗೊತ್ತಿಲಲ್. ತರಬೇತಿ ಕೂಡಾ ಇಲ್ಲ. ಅಚಾತುರ್ಯದಲ್ಲಿ ಫೈರ್ ಆಗಿದ್ದು, ತನಿಖೆಯಿಂದ ಗೊತ್ತಾಗಿದೆ.
ಘಟನೆ ಕುರಿತು ನಿತೀಶ್ ಮತ್ತು ಮನೆ ಮಾಲೀಕ ರಾಘವೇಂದ್ರ ಹೆಗಡೆ ವಿರುದ್ಧ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಕೇಸು ದಾಖಲು ಮಾಡಿದ್ದಾರೆ.
Comments are closed.