BBK-12: ಬಿಗ್ ಬಾಸ್ – 12 ರಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಎಂಟ್ರಿ – ಜಸ್ಟ್ ಹೀಗೆ ಮಾಡಿ ಸಾಕು

Share the Article

BBK-12: ಕನ್ನಡಿಗರ ಬಹು ನಿರೀಕ್ಷೆಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇನ್ನೇನು ಕೆಲವೇ ವಾರಗಳಲ್ಲಿ ಶುರುವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ಒಂದರ ಮೇಲೊಂದು ಅಪ್ ಡೇಟ್ ಗಳನ್ನು ನೀಡುತ್ತಲೇ ಬಂದಿದೆ. ಈಗ ತಾನೆ ಬಹಳ ಕುತೂಹಲಕರವಾದ ಪ್ರೊಮೊ ರಿಲೀಸ್ ಕೂಡ ಆಗಿದೆ. ಈ ಬೆನ್ನಲ್ಲೇ ಈಸಲಿಯ ಬಿಗ್ ಬಾಸ್ ಗೆ ಜನಸಾಮಾನ್ಯರಿಗೂ ಕೂಡ ಎಂಟ್ರಿ ಸಿಗಲಿದೆ ಎಂಬ ಮಾಹಿತಿ ದೊರೆತಿದೆ.

ಹೌದು, ಈ ಬಾರಿ ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳ ಜೊತೆಗೆ ಜನಸಾಮಾನ್ಯರಿಗೂ ಎಂಟ್ರಿ ಇದೆ. ಇದರ ಬಗ್ಗೆ ಸ್ವತಃ ಕಲರ್ಸ್‌ ಕನ್ನಡ ಹೊಸ ಪ್ರೋಮೋವನ್ನು ಹಂಚಿಕೊಳ್ಳುವ ಮೂಲಕ ಅಧಿಕೃತಗೊಳಿಸಿದೆ. ಸೆಪ್ಟೆಂಬರ್ 28 ರಿಂದ ಬಿಗ್ ಬಾಸ್ ಆರಂಭವಾಗುವುದನ್ನು ಕೂಡ ಖಚಿತಗೊಳಿಸಿದೆ.

ಅಲ್ಲದೆ ವಿಶೇಷವೆಂದರೆ ಈ ಬಾರಿ ಜನಸಾಮಾನ್ಯರಿಗೂ ಬಿಗ್ ಬಾಸ್ ಗೆ ಎಂಟ್ರಿ ಸಿಗಲಿದೆ. ಆದರೆ ಜನಸಾಮಾನ್ಯರು ಸ್ಪರ್ಧಿಯಾಗಲ್ಲ. ಬದಲಿಗೆ ಬಿಗ್‌ ಬಾಸ್‌ ಮನಗೆ ಅತಿಥಿಯಾಗಿ ಎಂಟ್ರಿ ನೀಡಬಹುದು. ಇದಕ್ಕಾಗಿ ನೀವು ಇಷ್ಟು ಮಾಡಿದ್ರೆ ಸಾಕಂತೆ. ಹಾಗಿದ್ರೆ ಪ್ರೋಮೋದಲ್ಲಿ ಏನಿದೆ ಎಂದು ನೋಡುವುದಾದರೆ, ಆರಂಭದಲ್ಲಿಯೇ ಕಿಚ್ಚ ಸುದೀಪ್‌ ʼನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಬಿಗ್‌ ಬಾಸ್‌ ಮನೆಗೆ ಸ್ವಾಗತ ಎಂದು ಹೇಳಿದ್ದಾರೆ.

ಇದನ್ನೂ ಓದಿ:Nude Gang: ನಡುಕ ಹುಟ್ಟಿಸಿದ ʻನಗ್ನ ಗ್ಯಾಂಗ್‌ʼ! : ʻಬೆತ್ತಲೆಯಾಗಿ ಬರ್ತಾರೆ, ಮಹಿಳೆಯರನ್ನ ಹೊತ್ತೊಯ್ತಾರೆʼ

ಬಿಗ್ ಬಾಸ್ ಮನೆಗೆ ಹೋಗಲು ಜಸ್ಟ್ ಹೀಗೆ ಮಾಡಿ :

ಸೋಮವಾರದಿಂದ ಶುಕ್ರವಾರ ಸಂಜೆ 6ರಿಂದ ರಾತ್ರಿ 1:30ರ ತನಕ್‌ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಸೀಸಿಯಲ್ಸ್‌ಗಳನ್ನು ನೋಡಿ ಪ್ರತಿ ಸೀರಿಯಲ್‌ನಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಸಹ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸರಿಯಾದ ಉತ್ತರಿಸಿದರೆ ಲಕ್ಕಿ ವಿನ್ನರ್ಸ್‌ಗೆ ಬಿಗ್‌ಬಾಸ್‌ ಮನೆಗೆ ಅತಿಥಿಯಾಗಿ ಹೋಗುವ ಅವಕಾಶ ಇರಲಿದೆ. ಸಂಜೆ 6ರಿಂದ 10:30ರ ವರೆಗ ಪ್ರಸಾರವಾಗುವ ದೃಷ್ಟಿ ಬೊಟ್ಟು, ಪ್ರೇಮಕಾವ್ಯ, ಭಾಗ್ಯಲಕ್ಷ್ಮೀ, ಮುದ್ದು ಸೊಸೆ, ನಿನಗಾಗಿ, ಭಾರ್ಗವಿ, ನಂದ ಗೋಕುಲ, ಯಜಮಾನ ಮತ್ತು ರಾಮಾಚಾರಿ ಧಾರಾವಾಹಿಗಳನ್ನು ನೋಡಿ ಅದರಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಿಗ್‌ ಬಾಸ್‌ ಮನೆಗೆ ನೀವೂ ಹೋಗಬಹುದು.

Comments are closed.