Home News UPI ಪಾವತಿ ಮಿತಿ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

UPI ಪಾವತಿ ಮಿತಿ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

Hindu neighbor gifts plot of land

Hindu neighbour gifts land to Muslim journalist

UPI: ಇದುವರೆಗೂ ಒಂದು ಲಕ್ಷ ರೂಪಾಯಿ ಇದ್ದ ಯುಪಿಐ ಪಾವತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ NPCI ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಹೌದು, ಇತ್ತೀಚಿನವರೆಗೂ ಒಂದೇ ಬಾರಿ ಗರಿಷ್ಠ 1 ಲಕ್ಷ ರೂಪಾಯಿ ಪಾವತಿ ಮಿತಿ ಇತ್ತು. ಇದೀಗ ಅದನ್ನು ಭಾರೀ ಮಟ್ಟಿಗೆ ಹೆಚ್ಚಿಸಿ 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಜೊತೆಗೆ, ದಿನವೊಂದಕ್ಕೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವಹಿವಾಟು ಮಾಡಲು ಅವಕಾಶ ನೀಡಲಾಗಿದೆ.

ಈ ಬದಲಾವಣೆಯು ಸೆಪ್ಟೆಂಬರ್ 15, 2025 ರಿಂದ ಜಾರಿಗೆ ಬರಲಿದೆ. ಇದರಿಂದಾಗಿ ಅಧಿಕ ಮೌಲ್ಯದ ವಹಿವಾಟುಗಳನ್ನು ಇನ್ನು ಮುಂದೆ ಯುಪಿಐ ಮೂಲಕವೇ ನಡೆಸಬಹುದಾಗಿದೆ. ತೆರಿಗೆ ಪಾವತಿ, ಸಾಲದ ಇಎಂಐ, ದೈನಂದಿನ ವಹಿವಾಟು ಮುಂತಾದ ಪ್ರಮುಖ ಹಣಕಾಸು ವ್ಯವಹಾರಗಳಲ್ಲಿ ಗ್ರಾಹಕರಿಗೆ ಇದರಿಂದ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

ಅಲ್ಲದೆ ಬಂಡವಾಳ ಮಾರುಕಟ್ಟೆ ಅಂದರೆ ಷೇರು ಮಾರುಕಟ್ಟೆ, ವಿಮೆ, ಮತ್ತು ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್‌ನಂತಹ ವರ್ಗಗಳಲ್ಲಿ ಪ್ರತಿ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲ 24 ಗಂಟೆಗಳ ಅವಧಿಯಲ್ಲಿ ಒಟ್ಟು 10 ಲಕ್ಷ ರೂ. ಮೊತ್ತದ ವಹಿವಾಟು ನಡೆಸಬಹುದಾಗಿದೆ.

ಇದನ್ನೂ ಓದಿ:MUDA Case: ಮೂಡಾ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್