Ragi Malt: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ, ಇನ್ನು ಸಿಗಲಿದೆ ʼರಾಗಿ ಮಾಲ್ಟ್‌ʼ

Share the Article

Ragi Malt: ರಾಜ್ಯದ ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿಯೊಂದು ಸರಕಾರ ನೀಡಿದ್ದು, ಇನ್ನು ಮುಂದೆ ವಾರದಲ್ಲಿ ಐದು ದಿನ ರಾಗಿ ಮಾಲ್ಟ್‌ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವ ಹೆಚ್‌ ಕೆ ಪಾಟೀಲ್‌ ಅವರು ಈ ಕುರಿತು ಮಾಹಿತಿ ನೀಡುತ್ತಾ, ಶಾಲಾ ಮಕ್ಕಳಿಗೆ ಪ್ರಸ್ತುತ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ನಿಂದ ವಾರದಲ್ಲಿ 3 ದಿನ ಹಾಲಿನ ಜೊತೆ ರಾಗಿ ಹೆಲ್ತ್‌ ಮಿಕ್ಸ್‌ ಪುಡಿಯನ್ನು ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ವಾರದಲ್ಲೆಇ ಐದು ದಿನಕ್ಕೆ ವಿಸ್ತರಣೆ ಮಾಡಲು ನಿರ್ಧಾರ ಮಾಡಲಾಗಿದೆ.

ಇದನ್ನೂ ಓದಿ:Women’s Asia Cup Hockey 2025: ಇಂದಿನಿಂದ ಮಹಿಳಾ ಏಷ್ಯಾ ಹಾಕಿ

27.02 ಕೋಟಿ ರೂ. ಅನ್ನು ರಾಜ್ಯ ಸರಕಾರ ಭರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.

Comments are closed.