GST: ಟಿವಿ, ಎಸಿ, ವಾಷಿಂಗ್ ಮಷೀನ್ ಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ರೆ ಈ ದಿನಾಂಕದ ಬಳಿಕ ಖರೀದಿಸಿ, ಹಣ ಉಳಿಸಿ

GST: ಕೇಂದ್ರ ಸರ್ಕಾರವು ಇದೀಗ ಜಿಎಸ್ಟಿ ಸ್ಲಾಬ್ ಅನ್ನು ಪರಿಷ್ಕರಿಸಿ ದೇಶದ ಜನರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಇದರ ಬೆನ್ನಲ್ಲೇ ಅನೇಕ ವಸ್ತುಗಳು ಜಿಎಸ್‌ಟಿ ಮುಕ್ತವಾದರೆ, ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಹಾಗಾದರೆ ನೀವೇನಾದರೂ ಟಿವಿ ಅಥವಾ ಎಸಿ ಕೊಳ್ಳುವ ಪ್ಲಾನ್ ಮಾಡಿದರೆ ಈ ದಿನಾಂಕದ ಬಳಿಕ ಕೊಂಡುಕೊಳ್ಳಿ. ಯಾಕೆಂದರೆ ಇವುಗಳ ಬೆಲೆಯಲ್ಲಿ ಬಾರಿ ಕಡಿಮೆಯಾಗುವ ಸಾಧ್ಯತೆ ಇದೆ.

ಹೌದು,GST 56ನೇ ಸಭೆಯಲ್ಲಿ ಕೇಂದ್ರವು ಕೆಲವು ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ತೆರಿಗೆಯನ್ನೂ ಕಡಿತಗೊಳಿದೆ. ಅದರಲ್ಲಿ 32 ಇಂಚುಗಳಿಗಿಂತ ದೊಡ್ಡದಾದ ಟೆಲಿವಿಷನ್‌ಗಳು, ಎಸಿ (ಹವಾನಿಯಂತ್ರಣಗಳು) ಮತ್ತು ಡಿಶ್ ವಾಶರ್ ಮಷಿನ್ (ಪಾತ್ರೆಗಳನ್ನ ತೊಳೆಯುವ ಮಷಿನ್‌ಗಳು)ಗಳು ಸೇರಿವೆ.
32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು, ಏರ್ ಕಂಡೀಷನರ್‌ಗಳು ಮತ್ತು ಡಿಶ್ ವಾಷರ್ ಮಷಿನ್‌ಗಳ ಮೇಲಿನ ತೆರಿಗೆಯನ್ನ ಶೇ.28 ರಿಂದ ಶೇ.18ಕ್ಕೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಅಂದರೆ ಈ ವಸ್ತುಗಳ ತೆರಿಗೆ ಶೇ.10ರಷ್ಟು ಕಡಿಮೆಯಾಗಲಿದ್ದು, ಬೆಲೆಯಲ್ಲಿ ಶೇ.8-9ರವರೆಗೆ ಕಡಿತಗೊಳ್ಳಲಿದೆ. ಅದರ ಅನ್ವಯ 43 ಇಂಚುಗಳ ಟಿವಿ ಬೆಲೆಯಲ್ಲಿ 2000 ರೂ.ಕಡಿಮೆಯಾದರೆ, 75 ಇಂಚುಗಳ ಟಿವಿ ಬೆಲೆಯಲ್ಲಿ ಅಂದಾಜು 23, 000 ರೂ.ಕಡಿಮೆಯಾಗಲಿದೆ. ಎಸಿ ಮತ್ತು ಡಿಶ್‌ವಾಶರ್‌ಗಳು ಪ್ರತಿ ಯೂನಿಟ್‌ಗೆ 3,500 ರಿಂದ 4,500 ರೂ.ಗಳವರೆಗೆ ಕಡಿತಗೊಳ್ಳಬಹುದು ಎಂದು ಎಕನಾಮಿಕ್ ಟೈಮ್ಸ್‌ನ ವರದಿ ತಿಳಿಸಿದೆ.
ಅಂದಹಾಗೇ, ಈ ಪರಿಷ್ಕರಣೆ ದರಗಳೆಲ್ಲವೂ ಸೆಪ್ಟೆಂಬರ್ 22ರ ಬಳಿಕ ಜಾರಿಯಾಗಲಿದೆ. ಹೀಗಾಗಿ ನೀವು ಈ ವಸ್ತುಗಳನ್ನ ಖರೀದಿ ಮಾಡೋ ಪ್ಲ್ಯಾನ್ ಇದ್ರೆ ಸೆ.22ರ ಬಳಿಕ ಕೊಂಡುಕೊಳ್ಳಿ. ಸೆಪ್ಟೆಂಬರ್ 22ರ ಬಳಿಕ ಕೊಂಡುಕೊಂಡರೆ ನಿಮ್ಮಲ್ಲಿ ಸಾಕಷ್ಟು ಹಣ ಉಳಿತಾಯವಾಗುತ್ತದೆ.
Comments are closed.