Gold smuggling: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ

Gold smuggling: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ 127 ಕೆಜಿ ಚಿನ್ನ ಅಕ್ರಮ ಸಾಗಾಟ ಮಾಡಿದ್ದು ಸಾಬೀತಾದ ಹಿನ್ನೆಲೆ, ಡಿಆರ್‌ಐ ಶಾಕ್ ನೀಡಿದ್ದು, ಈಕೆಗೆ 102 ಕೋಟಿ ರೂ. ದಂಡ ವಿಧಿಸಿದೆ.

127 ಕೆಜಿ ಚಿನ್ನವನ್ನು 1 ವರ್ಷದಲ್ಲಿ ನಟಿ ಬೆಂಗಳೂರಿಗೆ ಅಕ್ರಮ ಸಾಗಾಟ (Gold smuggling) ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಡಿಆರ್‌ಐ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ 102 ಕೋಟಿ ರೂ. ಪಾವತಿ ಮಾಡುವಂತೆ ರನ್ಯಾ ರಾವ್‌ಗೆ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ.
ನಾಲ್ವರು ಆರೋಪಿಗಳಿಗೂ ಡಿಆರ್‌ಐ ಶೋಕಾಸ್ ನೋಟಿಸ್ ನೀಡಿದೆ. ಈಗಾಗಲೇ ಇ.ಡಿ 37 ಕೋಟಿಯಷ್ಟು ಆಸ್ತಿ ಜಪ್ತ ಮಾಡಿದೆ. ಸದ್ಯ ಕಾಫಿಪೋಸಾ ಅಡಿಯಲ್ಲಿ ರನ್ಯಾ ರಾವ್ ಬಂಧನ ಆಗಿದೆ.
Bangalore: ಧಾರಾವಾಹಿ ನಿರ್ಮಾಣಕ್ಕಾಗಿ 1 ಕೋಟಿ ಹಣ ಪಡೆದು ವಂಚನೆ: ನಟಿ ನಿರ್ಮಲಾ, ಗಂಡ ಸತ್ಯಾ ವಿರುದ್ಧ ಕೇಸ್ ದಾಖಲು
Comments are closed.