Kitchen Tips: ಕಿಚನ್ ಸಿಂಕ್ ನಿಂದ ವಾಸನೆ ಬರುತ್ತಿದ್ರೆ ಜಸ್ಟ್ ಹೀಗೆ ಮಾಡಿ ಸಿಂಕ್ ಕ್ಲೀನ್ ಆಗಿ ಪರಿಮಳ ಬರುತ್ತೆ!

Kitchen Tips: ಅಡುಗೆ ಮಾಡಿದ ಬಳಿಕ, ಪಾತ್ರೆಗಳನ್ನೆಲ್ಲಾ ಕಿಚನ್ ನಲ್ಲಿ ಬಿಟ್ಟು ಹೋಗುತ್ತೇವೆ, ಅಥವಾ ಸಮಯ ಸಿಗದೇ ಅಡುಗೆ ಮನೆಯ ಸಿಂಕ್ ನಲ್ಲಿಯೇ ಪಾತ್ರೆಗಳನ್ನು ಬಿಟ್ಟು ಹೋಗುತ್ತೇವೆ. ಆದರೆ ಸಂಜೆ ಮನೆಗೆ ಹಿಂದಿರುಗಿ ಬಂದ ಬಳಿಕ, ಕಿಚನ್ ನಲ್ಲಿ ಏನೋ ಒಂಧರಾ ವಾಸನೆ ಬರಲು ಶುರು ವಾಗುತ್ತದೆ! ಆದ್ರೆ ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಿಡುವುದರಿಂದ ಪಾತ್ರೆಗಳನ್ನು ತೊಳೆದ ಬಳಿಕ ಇಲ್ಲಿ ಅಂಟಿರುವ ಜಿಡ್ಡಿನ ಅಂಶಗಳಿಂದಾಗಿ ವಾಸನೆ ಬರಲು ಶುರುವಾಗುತ್ತದೆ. ಅದಕ್ಕಾಗಿ ಅಡುಗೆ ಮನೆಯ ಸಿಂಕ್ ನಿಂದ ಬರುವ ಕೆಟ್ಟ ವಾಸನೆಯನ್ನು ತೆಗೆಯುವ ನೈಸರ್ಗಿಕ ವಿಧಾನ (Kitchen Tips) ಇಲ್ಲಿದೆ.

ಕಿತ್ತಳೆ ಸಿಪ್ಪೆ
ಕಿತ್ತಳೆ ಸಿಪ್ಪೆಗಳನ್ನು ಸಿಂಕ್ ಮೇಲೆ ಉಜ್ಜಿ ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಡಿ. ಈಗ ಬಿಸಿ ನೀರಿನಿಂದ ಸಿಂಕ್ ಅನ್ನು ತೊಳೆಯಿರಿ. ಇದು ಸಿಂಕ್ ನಿಂದ ಬರುವ ವಾಸನೆಯನ್ನು ತೆಗೆದು ಹಾಕುತ್ತದೆ.
ನಿಂಬೆ ಮತ್ತು ಉಪ್ಪಿನ ಪೇಸ್ಟ್
ನಿಂಬೆ ಮತ್ತು ಉಪ್ಪಿನಿಂದ ತಯಾರಿಸಿದ ಪೇಸ್ಟ್‌ನಿಂದ ಸಿಂಕ್ ಅನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ, ಸಿಂಕ್ ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ದುರ್ವಾಸನೆಯೂ ಮಾಯವಾಗುತ್ತದೆ.
ಕಪ್ಪು ವಿನೆಗರ್
ಪಾತ್ರೆಗಳನ್ನು ತೊಳೆದ ನಂತರ, ಬ್ರಷ್ ಸಹಾಯದಿಂದ ಸಿಂಕ್ ಅನ್ನು ಕಪ್ಪು ವಿನೆಗರ್ ನಿಂದ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ, ಸಿಂಕ್ ನ ವಾಸನೆ ಹೋಗುತ್ತದೆ ಮತ್ತು ಅದು ಹೊಳೆಯುವಂತೆ ಕಾಣುತ್ತದೆ.
ಅಡುಗೆಸೋಡಾ
ಸಿಂಕ್‌ನಲ್ಲಿ ಅಡಿಗೆ ಸೋಡಾವನ್ನು ಸಿಂಪಡಿಸಿ ಮತ್ತು 5 ನಿಮಿಷಗಳ ನಂತರ ಸ್ಕ್ರಬ್‌ನಿಂದ ಸಿಂಕ್ ಅನ್ನು ಸ್ಕ್ರಬ್ ಮಾಡಿ. ಇದು ಸಿಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸುತ್ತದೆ ಮತ್ತು ಸಿಂಕ್‌ನಿಂದ ಬರುವ ವಾಸನೆಯೂ ಸಹ ಹೋಗುತ್ತದೆ.
ಕುದಿಯುವ ನೀರನ್ನು ಸುರಿಯಿರಿ
ದಿನಕ್ಕೆ ಒಮ್ಮೆ ಸಿಂಕ್‌ನಲ್ಲಿ ಕುದಿಯುವ ನೀರನ್ನು ಸುರಿಯಿರಿ. ಇದು ಸಂಗ್ರಹವಾದ ಎಣ್ಣೆ, ಕೊಳಕು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ.
ಅಡುಗೆ ಸೋಡಾ ಮತ್ತು ವಿನೆಗರ್
ಒಂದು ಕಪ್ ಅಡುಗೆ ಸೋಡಾವನ್ನು ಸಿಂಕ್ ಗೆ ಹಾಕಿ. ಅದರ ಮೇಲೆ ಅರ್ಧ ಕಪ್ ಬಿಳಿ ವಿನೆಗರ್ ಸುರಿಯಿರಿ ಮತ್ತು ಸ್ವಲ್ಪ ಸಮಯದವರೆಗೆ ನೊರೆ ಬರಲು ಬಿಡಿ ಮತ್ತು ನಂತರ ಬಿಸಿ ನೀರಿನಿಂದ ತೊಳೆಯಿರಿ. ಈ ಪರಿಹಾರವು ಸಿಂಕ್ ನಿಂದ ವಾಸನೆ ಮತ್ತು ಸಂಗ್ರಹವಾದ ಕೊಳೆಯನ್ನು ತೆಗೆದು ಹಾಕುತ್ತದೆ.
ನಾಫ್ಥಲೀನ್ ಬಾಲ್
ನೀವು ಸಿಂಕ್ ನಲ್ಲಿ ನಾಫ್ಥಲೀನ್ ಬಾಲ್ ಗಳನ್ನು ಹಾಕಬಹುದು. ಇದು ಸಿಂಕ್ ನಿಂದ ಬರುವ ವಾಸನೆಯನ್ನು ತೆಗೆದುಹಾಕುತ್ತದೆ ಮತ್ತು ಕೀಟಗಳನ್ನು ಸಹ ತಡೆಯುತ್ತದೆ.
Wild Animals: ತೋಟಕ್ಕೆ ರೋಗ ಬಂದ್ರೆ ಔಷಧಿ ಹೊಡೆದು ನಿಯಂತ್ರಿಸಬಹುದು: ಆನೆ ಬಂದ್ರೆ ಎಂತ ಮಾಡೋದು?
Comments are closed.