Life style: ಮಲಗುವ ಮುನ್ನ ಮೊಬೈಲ್ ಬಳಕೆ ಮಾಡ್ತೀರಾ?

Share the Article

Life style: ಬೆಳಿಗ್ಗೆ ಬೆಡ್ ನಿಂದ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ಫೋನ್ ಇಲ್ಲದೆ ಸಮಯ ಕಳೆಯಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಬಂದು ತಲುಪಿದೆ. ಮಕ್ಕಳು, ಯುವಕರು ಸೇರಿ ಎಲ್ಲರೂ ಸ್ಮಾರ್ಟ್ ಫೋನ್ ಗಳಿಗೆ ವ್ಯಸನಿಯಾಗುತ್ತಿದ್ದಾರೆ. ಆದ್ರೆ ನೀವು ಮಲಗುವ ಮುನ್ನ ಮೊಬೈಲ್ ನೋಡಿ ಸುಸ್ತು ಆದ ಮೇಲೆ ನಿದ್ದೆಗೆ ಜಾರುವ ಚಟವು ಇದ್ದಲ್ಲಿ ಆ ಅಭ್ಯಾಸ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿದ್ದೆಯ ಚಕ್ರದ ಅಡಚಣೆ:

ರಾತ್ರಿ ಮಲಗುವ ಮುನ್ನ ಮೊಬೈಲ್ ಫೋನ್ ಬಳಸುವುದರಿಂದ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ಇದು ನಿಮ್ಮ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮೆದುಳಿನ ಮೇಲೆ ಪರಿಣಾಮ:

ನಿಮ್ಮ ಸ್ಮಾರ್ಟ್ ಫೋನ್ ಸ್ಕ್ರೀನ್ ನಿಂದ ಬರುವ ನೀಲಿ ಬೆಳಕು ನಿಮ್ಮ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಈ ಹಾರ್ಮೋನ್ ನಿದ್ದೆಗೆ ಅತ್ಯಂತ ಅವಶ್ಯಕ. ಈ ಹಾರ್ಮೋನ್ ಸರಿಯಾಗಿ ಉತ್ಪಾದನೆ ಆಗದೆ ಇದ್ದರೆ, ನಿದ್ದೆಗೆ ತೊಂದರೆ ಉಂಟು ಮಾಡುತ್ತದೆ.

ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳು:

ಸರಿಯಾಗಿ ನಿದ್ದೆ ಮಾಡದೇ ಇದ್ದರೆ ನಿಮ್ಮ ಏಕಾಗ್ರತೆ ಕಡಿಮೆ ಆಗಬಹುದು.

⁠ಮಾನಸಿಕ ಅಶಾಂತಿ, ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುವುದು.

⁠ನಿದ್ರಾಹೀನತೆಯು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ⁠ನಿದ್ರಾಹೀನತೆಯು ಬೊಜ್ಜುತನಕ್ಕೆ ಕಾರಣವಾಗಬಹುದು.

ನಿದ್ರಾಹೀನತೆಯು ಖಿನ್ನತೆಯಂತಹ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನು ತಪ್ಪಿಸಲು ಅನಗತ್ಯ

⁠ಮಲಗುವ ಕನಿಷ್ಠ ಒಂದು ಗಂಟೆಯ ಮೊದಲು ಫೋನ್ ದೂರ ಇಡಿ.

⁠ನಿಮ್ಮ ಅಲಾರಾಂ ಗೆ ಡಿಜಿಟಲ್ ಗಡಿಯಾರ ಬಳಸಿ, ನಿಮ್ಮ ಫೋನ್ ಮಲಗುವ ಕೋಣೆಯಲ್ಲಿ ಇಡಬೇಡಿ.

ಸಾಧ್ಯ ಆದಷ್ಟು ಫೋನ್ ಬಳಕೆ ಮಿತಗೊಳಿಸಿ ಬೇರೆ ಉತ್ತಮ ಅಭ್ಯಾಸ ರೂಢಿ ಮಾಡಿಕೊಳ್ಳಿ.

Pakistan Flood: ದಶಕಗಳ ನಂತರ ಪಾಕಿಸ್ತಾನದಲ್ಲಿ ಭಾರಿ ಪ್ರವಾಹ – 854 ಜನರು ಸಾವು; 10 ಲಕ್ಷ ಜನರ ಸ್ಥಳಾಂತರ

Comments are closed.