Medicine: 8 ಔಷಧಿಗಳನ್ನು ಉಪಯೋಗಿಸದಂತೆ ಎಚ್ಚರಿಕೆ ನೀಡಿದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ!

Medicine: 8 ಔಷಧಿಗಳನ್ನು ಉತ್ತಮ ಗುಣಮಟ್ಟದಲ್ಲವೆಂದು ವರದಿ ಮಾಡಿ ಅದನ್ನು ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ (Medicine) ಆಡಳಿತ ಇಲಾಖೆಯು ಎಚ್ಚರಿಕೆ ನೀಡಿದೆ.

ಉಪಯೋಗಿಸಬಾರದ ಔಷಧಿಗಳು:
ಹೆಲ್ತಿ ಲೈಫ್ ಫಾರ್ಮಾ ಪ್ರೈ, ಲಿಮಿಟೆಡ್ ನ ಕ್ಯಾಲ್ಸಿಯಂ ಅಂಡ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ,
ಭವ್ಯ ಇಂಡಸ್ಟ್ರೀಸ್ ನ ಆಕ್ಟಿವ್ ಅಲೋವೆರಾ ಮತ್ತು ನೀಮ್ ಸೋಪ್
ರಾಜ್ ದೀಪ್ ಫಾರ್ಮಸೂ್ರಟಿಕಲ್ಸ್ ಲೈಫೋಜೆಸಿಕ್
ಮೈಕ್ರೋಫಾರ್ ಮುಲೇಷನ್ಸ್ ನ ಅಮೋಕ್ಸಿಲಿನ್ ಮತ್ತು ಪೊಟ್ಯಾಶಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ ಐಪಿಫಾರ್ಮ ಕೇರ್ ನ ಮೆನ್ನೀಷಿಯಂ ಸಟ್ ಪಾಸ್ಪೇಟ್ ಬಿಪಿ
ಡ್ಯಾಫೋಹಿಲ್ಸ್ ಲ್ಯಾಬೋರೇಟರಿಸ್ ಪ್ರೈ ಲಿಮಿಟೆಡ್ ಅಡಾಲ್ಮಾಮ್ ಎಂ ಆರ್
ಮೆಡಿಸಿಸ್ ಬಯೋಟೆಕ್ ಪ್ರೈ ಲಿಮಿಟೆಡ್ನ ಫೆರೋಸ್ ಅಸ್ಟ್ರಿಬೇಟ್
ಫಾಲಿಕ್ ಆಸಿಡ್ ಮತ್ತು ಜಿಂಕ್ ಸಸ್ಪೀಟ್ ಟ್ಯಾಬ್ಲೆಟ್
ಈ ಮೇಲಿನ ಔಷಧಿಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷದ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಈ ಔಷಧಿಗಳ ದಾಸ್ತಾನು ಹೊಂದಿದ್ದರೆ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ಇಲಾಖೆಯು ಸೂಚನೆ ನೀಡಿದೆ.
Drupadi Murmu: ಮೈಸೂರಿಗೆ ಇಂದು ರಾಷ್ಟ್ರಪತಿ ಆಗಮನ – ಎರಡು ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವ ದೌಪದಿ ಮುರ್ಮು
Comments are closed.