Mangalore: ಮಂಗಳೂರು: ರಿಕ್ಷಾ ಚಾಲಕನಿಗೆ ಚೂರಿ ಇರಿತ!

Mangalore: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಆರೋಪದಲ್ಲಿ ಅಪರಿಚಿತನಿಂದ ರಿಕ್ಷಾ ಚಾಲಕನಿಗೆ ಇರಿದು ಗಾಯಗೊಳಿಸಿರುವ ಘಟನೆ ಮಂಗಳೂರಿನ ಫಳೀರ್ ಬಳಿ ರವಿವಾರ ರಾತ್ರಿ 9:15ರ ಸುಮಾರಿಗೆ ನಡೆದಿದೆ. ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಬಶೀರ್ ಎಂದು ಗುರುತಿಸಲಾಗಿದೆ.

ಚಾಲಕನ ಹೊಟ್ಟೆಗೆ ಇರಿದು ಗಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯ ಬಗ್ಗೆ ಮಂಗಳೂರು (Mangalore) ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ಗಾಯಾಳು ಆಟೋ ಚಾಲಕನಿಂದ ಮಾಹಿತಿ ಪಡೆದಿದ್ದಾರೆ.
Comments are closed.