Temples : ಭಾರತದಲ್ಲಿ ಸರ್ಕಾರದ ಅಧೀನದಲ್ಲಿರುವ ದೇವಾಲಯಗಳೆಷ್ಟು? ವಾರ್ಷಿಕವಾಗಿ ಇವುಗಳಿಂದ ಬರುತ್ತೆ ಲಕ್ಷ, ಲಕ್ಷ ಕೋಟಿ ಆದಾಯ !!

Temples : ಭಾರತವು ದೇವತೆಗಳ ನೆಲೆಬೀಡು ಎಂದು ಹೇಳಲಾಗುತ್ತದೆ. ಪುರಾಣಗಳಿಂದಲೂ ಕೂಡ ನಮ್ಮಲ್ಲಿ ದೈವರಾದನೇ, ದೇವರಧನೆಗೆ ಸಾಕಷ್ಟು ಮಹತ್ವವಿದೆ. ಅಂತೆಯೇ ಇಂದು ನಾವು ನಮ್ಮ ಆರಾಧಕ ಮೂರ್ತಿಗಳನ್ನು ಗುಡಿಗಳಲ್ಲಿಟ್ಟು ಪೂಜಿಸುತ್ತೇವೆ. ಕೆಲವು ದೇವಾಲಯಗಳು ಗಂತೂ ಲಕ್ಷಗಟ್ಟಲೆ ಭಕ್ತಾಭಿಮಾನಿಗಳು ಹರಿದು ಬರುತ್ತಾರೆ. ಹೀಗಾಗಿ ಇಂದು ಸಾಕಷ್ಟು ಪ್ರಸಿದ್ಧಿ ಹೊಂದಿದ ದೇವಾಲಯಗಳನ್ನು ಸರ್ಕಾರಗಳು ತನ್ನ ಸುಪರ್ದಿಗೆ ತೆಗೆದುಕೊಂಡು ಧಾರ್ಮಿಕ ದತ್ತಿ ಇಲಾಖೆಯಡಿ ಅವುಗಳನ್ನು ನಿರ್ವಹಿಸುತ್ತದೆ. ಹಾಗಾದರೆ ನಮ್ಮ ಭಾರತದಲ್ಲಿ ಸರ್ಕಾರದ ಅಧೀನದಲ್ಲಿರುವ ದೇವಾಲಯಗಳು ಎಷ್ಟು? ಇವುಗಳಿಂದ ವಾರ್ಷಿಕವಾಗಿ ಎಷ್ಟು ಆದಾಯ ಬರುತ್ತದೆ ಗೊತ್ತ?

ಭಾರತದಲ್ಲಿ ಸುಮಾರು 7.5 ಲಕ್ಷ ದೇವಾಲಯಗಳಿವೆ. ಅವುಗಳಲ್ಲಿ ಸುಮಾರು 4 ಲಕ್ಷ ದೇವಾಲಯಗಳು ವಿವಿಧ ರಾಜ್ಯ ಸರ್ಕಾರಗಳ ಅಧೀನದಲ್ಲಿವೆ. ಈ ದೇವಾಲಯಗಳಲ್ಲಿ ಭಕ್ತರಿಂದ ಸಂಗ್ರಹವಾಗುವ ದೇಣಿಗೆ ಮತ್ತು ಕಾಣಿಕೆಗಳು ವಾರ್ಷಿಕವಾಗಿ ಸುಮಾರು ₹2.5 ರಿಂದ ₹3 ಲಕ್ಷ ಕೋಟಿಯಷ್ಟಿದೆ. ಇದು ಭಾರತದ ಒಟ್ಟು GDPಯ ಶೇ. 2.3 ರಷ್ಟಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣ ನಿರ್ವಹಣೆಯ ಜವಾಬ್ದಾರಿ ಸರ್ಕಾರಗಳ ಮೇಲಿದೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ದೇವಾಲಯಗಳು ಸರ್ಕಾರಿ ನಿಯಂತ್ರಣದಲ್ಲಿವೆ. ಕರ್ನಾಟಕದಲ್ಲಿ ಸುಮಾರು 34 ಸಾವಿರ ದೇವಾಲಯಗಳನ್ನು ಮುಜರಾಯಿ ಇಲಾಖೆಯು ನಿರ್ವಹಿಸುತ್ತದೆ.
ಅಂದಹಾಗೆ ಇತ್ತೀಚಿಗೆ ಮದ್ರಾಸ್ ಹೈಕೋರ್ಟ್ ದೇವಾಲಯಗಳ ಕಾಣಿಕೆ ಹಣವನ್ನು ಸರ್ಕಾರ ಬಳಸುವಂತಿಲ್ಲ ಅದನ್ನು ಧಾರ್ಮಿಕ ಮತ್ತು ಧಾರ್ಮಿಕ ದತ್ತಿ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ತಮಿಳುನಾಡಿನ ಸರ್ಕಾರಕ್ಕೆ ಆದೇಶ ಮಾಡಿ ತೀರ್ಪು ನೀಡಿದೆ.
Comments are closed.