Tamilunadu : ಇನ್ಮುಂದೆ ದೇವಾಲಯಗಳ ಹಣ ಸರ್ಕಾರಕ್ಕೆ ಸೇರಿದಲ್ಲ, ಈ ಕಾರ್ಯಕ್ಕೆ ಮಾತ್ರ ಬಳಸಬೇಕು – ಹೈ ಕೋರ್ಟ್ ಕಟ್ಟಪ್ಪಣೆ !!

Share the Article

Tamilunadu : ಹಿಂದೂಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಇನ್ನು ಮುಂದೆ ದೇವಾಲಯಗಳ ಹಣವನ್ನು ಸರ್ಕಾರ ಖರ್ಚು ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಹೌದು, ಭಕ್ತರು ದೇವಾಲಯಕ್ಕೆ ನೀಡುವ ಚಿನ್ನ, ಬೆಳ್ಳಿ ಹಾಗೂ ಹಣದ ದೇಣಿಗೆಯನ್ನು ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಂಡು ಅದನ್ನು ವಿವಿಧ ಕೆಲಸ ಕಾರ್ಯಗಳಿಗೆ ಬಳಸುತ್ತದೆ. ಆದರೆ ಇನ್ನು ಮುಂದೆ ಈ ರೀತಿ ಸರ್ಕಾರ ದೇವಾಲಯದ ಹಣವನ್ನು ಬಳಸಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಖಡಕ್ ಆದೇಶ ಮಾಡಿದೆ.

ದೇವಾಲಯಗಳಿಗೆ ಭಕ್ತರು ನೀಡುವ ಕಾಣಿಕೆ ಮತ್ತು ದೇಣಿಗೆಗಳು ದೇವರಿಗೆ ಸೇರಿದ್ದಾಗಿವೆ. ಸರ್ಕಾರಕ್ಕೆ ಸೇರಿದ್ದಲ್ಲ, ಆದ್ದರಿಂದ ಈ ಹಣವನ್ನು ಕೇವಲ ದೇವಸ್ಥಾನಗಳ ಕೆಲಸ ಅಥವಾ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಬಳಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಆದೇಶವು ತಮಿಳುನಾಡು ಸರ್ಕಾರದ ವಿರುದ್ಧವಾಗಿದ್ದರೂ, ಇಡೀ ದೇಶದ ಹಿಂದೂ ಭಕ್ತರಲ್ಲಿ ಹೊಸ ಆಶಯ ಮೂಡಿಸಿದೆ.

ಅಂದಹಾಗೆ ತಮಿಳುನಾಡಿನ ಸ್ಟಾಲಿನ್ ಸರ್ಕಾರ ಸರ್ಕಾರದ ಹಣವನ್ನು ಬಳಸಿ ಮದುವೆ ಮಂಟಪಗಳನ್ನು ನಿರ್ಮಿಸಲು ಮುಂದಾಗಿತ್ತು. 2023 ಮತ್ತು 2025ರ ನಡುವೆ, MK ಸ್ಟಾಲಿನ್ ಅವರ ಸರ್ಕಾರ ಐದು ಆದೇಶಗಳನ್ನು ಹೊರಡಿಸಿತ್ತು. ಆದೇಶದ ಪ್ರಕಾರ, 27 ದೇವಾಲಯಗಳಲ್ಲಿ 80 ಕೋಟಿ ರೂ.ಗಳೊಂದಿಗೆ ಮದುವೆ ಮಂಟಪಗಳನ್ನು ನಿರ್ಮಿಸಲು ಮುಂದಾಗಿತ್ತು. ಕೋರ್ಟ್ ಎದುರು ಮದುವೆ ಕೂಡ ಧಾರ್ಮಿಕ ಕಾರ್ಯ ಎಂಬ ವಾದವನ್ನು ಸರ್ಕಾರ ಹೂಡಿತ್ತು. ಆದರೆ ಮದ್ರಾಸ್ ಹೈಕೋರ್ಟ್ ಸರ್ಕಾರದ ವಾದಗಳನ್ನು ತಿರಸ್ಕರಿಸಿತು. ದೇವಾಲಯದ ಹಣವನ್ನು ಸಾರ್ವಜನಿಕ ಅಥವಾ ಸರ್ಕಾರಿ ಹಣವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಕ್ತರು ದಾನ ಮಾಡುವ ಹಣವನ್ನು ದೇವರಿಗೆ ಮಾತ್ರ ಸೇರಿದೆ. ಸರ್ಕಾರ ಆದನು ತನ್ನ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳದೆ ಧಾರ್ಮಿಕ ಮತ್ತು ದತ್ತಿ ಕಾರ್ಯಗಳಿಗೆ ಮಾತ್ರ ಬಳಸಬೇಕು ಎಂದು ಕಟ್ಟಪ್ಪಣೆ ಮಾಡಿದೆ.

Mangalore: ಮಂಗಳೂರು: ರಿಕ್ಷಾ ಚಾಲಕನಿಗೆ ಚೂರಿ ಇರಿತ!

Comments are closed.