Financial Rules: ಸೆಪ್ಟೆಂಬರ್ 1 ರಿಂದ ಬದಲಾಗುವ ಹಣಕಾಸಿನ ನಿಯಮಗಳು ಯಾವುದು?

Financial Rules: ಪ್ರತಿ ತಿಂಗಳ ಆರಂಭದಲ್ಲಿ ಕೆಲವು ನಿಯಮಗಳು ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ, ಕೆಲವೊಮ್ಮೆ ಹಳೆಯ ನಿಯಮಗಳನ್ನು ನವೀಕರಿಸಲಾಗುತ್ತದೆ.

ಈ ಬಾರಿ, ಸೆಪ್ಟೆಂಬರ್ 1, 2025 ರಿಂದ ಹಣಕಾಸು (Financial Rules)ವ್ಯವಹಾರ ದಲ್ಲಿ ಹಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಅವುಗಳ ಪಟ್ಟಿ ಇಲ್ಲಿದೆ.
ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ:
ಸೆಪ್ಟೆಂಬರ್ 1 ರಿಂದ, ಡಿಜಿಟಲ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಕೆಲವು ವ್ಯಾಪಾರಿಗಳು ಮತ್ತು ಸರ್ಕಾರಿ ವಹಿವಾಟುಗಳಿಗೆ ಮಾಡಿದ ಖರ್ಚುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡಲಾಗುವುದಿಲ್ಲ.
ಬೆಳ್ಳಿ ಆಭರಣ ಹಾಲ್‌ಮಾರ್ಕ್
ಬೆಳ್ಳಿ ಆಭರಣಗಳ ಶುದ್ಧತೆ ಕುರಿತು, ಸೆಪ್ಟೆಂಬರ್ 1 ರಿಂದ ಬೆಳ್ಳಿ ಆಭರಣಗಳಿಗೆ ಹಾಲ್‌ಮಾರ್ಕ್ ನಿಯಮ ಜಾರಿಯಾಗಬಹುದು.
ಎಲ್‌ಪಿಜಿ, ಸಿಎನ್‌ಜಿ, ಪಿಎನ್‌ಜಿ ದರ ಬದಲಾವಣೆ:
ಪ್ರತಿ ತಿಂಗಳ ಆರಂಭದಲ್ಲಿ ಎಲ್‌ಪಿಜಿ ಸಿಲಿಂಡರ್ ದರಗಳು ಬದಲಾಗುತ್ತವೆ. ಸೆಪ್ಟೆಂಬರ್ 1 ರಂದು ಮತ್ತೆ ದರ ಬದಲಾವಣೆಯಾಗಬಹುದು.ಇದಲ್ಲದೆ, ಸಿಎನ್‌ಜಿ ಮತ್ತು ಪಿಎನ್‌ಜಿ ದರಗಳಲ್ಲಿಯೂ ಬದಲಾವಣೆಯಾಗುವ ಸಾಧ್ಯತೆಯಿದೆ.
ಅಂಚೆ ಸೇವೆ ಬದಲಾವಣೆ: ಸೆಪ್ಟೆಂಬರ್ 1 ರಿಂದ ನೀವು ಕಳುಹಿಸುವ ಎಲ್ಲಾ ಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಕಳುಹಿಸಲಾಗುತ್ತದೆ. ಪ್ರತ್ಯೇಕ ಸೇವೆಯಾಗಿ ರಿಜಿಸ್ಟರ್ ಪೋಸ್ಟ್ ಇನ್ನು ಮುಂದೆ ಇರುವುದಿಲ್ಲ.
Comments are closed.