Ballari: ಅಕ್ರಮ ಗಣಿಗಾರಿಕೆ ನಡೆಸಿದವರಿಗೆ ರಾಜ್ಯ ಸರ್ಕಾರದಿಂದ ಹೊಸ ಕಾಯ್ದೆ ಜಾರಿ!

Share the Article

Ballari: ರಾಜ್ಯ ಸರ್ಕಾರವು ಅಕ್ರಮ ಗಣಿಗಾರಿಕೆಯಿಂದಾದ ನಷ್ಟವನ್ನು ವಸೂಲಿ ಮಾಡಲು ನೂತನ ಕಾಯ್ದೆಯೊಂದನ್ನು ಅಂಗೀಕರಿಸಿದ್ದು, ಈ ಹೊಸ ಮಸೂದೆಯು ಅಕ್ರಮ ಚಟುವಟಿಕೆಗಳ ಮೂಲಕ ಗಳಿಸಿದ ಹಣ ಮತ್ತು ಆಸ್ತಿಗಳನ್ನು ಜಪ್ತಿ ಮಾಡುವ ಅಧಿಕಾರವನ್ನು ಸರ್ಕಾರಕ್ಕೆ ನೀಡಿದೆ.

2004ರಿಂದ 2011ರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಯು ತೀವ್ರ ಸ್ವರೂಪ ಪಡೆದಿತ್ತು. ಈ ಸಂದರ್ಭದಲ್ಲಿ ರಾಜಧನವನ್ನು ಸಮರ್ಪಕವಾಗಿ ಪಾವತಿಸದೆ, ಅಕ್ರಮವಾಗಿ ಅದಿರು ಸಾಗಿಸಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿತ್ತು. ಆಗಿನ ಲೋಕಾಯುಕ್ತರ ವರದಿಯ ಆಧಾರದ ಮೇಲೆ ಹಲವು ರಾಜಕೀಯ ಮುಖಂಡರು, ಗಣಿ ಮಾಲೀಕರು ಮತ್ತು ಸಾಗಾಟಗಾರರ ಮೇಲೆ ಪ್ರಕರಣಗಳು ದಾಖಲಾಗಿ, ಅನೇಕರು ಜೈಲು ಸೇರಿದ್ದರು.

ಆದರೂ, ಹಲವರ ಮೇಲಿನ ಆರೋಪಗಳು ಸಾಬೀತಾದಾಗಲೂ, ಅವರಿಂದ ಸೂಕ್ತ ದಂಡ ವಸೂಲಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಸರ್ಕಾರವು “ವಸೂಲಾತಿ ಆಯುಕ್ತರ ನೇಮಕಾತಿ” ಮಸೂದೆಯನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡರಲ್ಲೂ ಅಂಗೀಕರಿಸಿದೆ. ಈ ಕಾಯ್ದೆಯು ಅಕ್ರಮ ಗಣಿಗಾರಿಕೆಯಿಂದ ಗಳಿಸಿದ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿ ಮಾಡಲು ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡುತ್ತದೆ. ಈ ಕಾಯ್ದೆಯ ಮೂಲಕ, ಸರ್ಕಾರವು ಬರೋಬ್ಬರಿ 80,000 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯಲ್ಲಿದೆ.

Heart Attack: ಹೃದಯಾ ರಿಪೇರಿ ಮಾಡುವವನಿಗೇ ಹೃದಾಯಾಘಾತ: ಹೃದಯಾಘಾತದಿಂದ 39 ವರ್ಷದ ಹೃದಯ ಶಸ್ತ್ರಚಿಕಿತ್ಸಕ ಸಾವು

Comments are closed.