Puttur: ಪುತ್ತೂರು: ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ವಶ!

Share the Article

Puttur: ಬಾಲಕಿಯನ್ನು ಹಲವು ಬಾರಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ದ.ಕ.ಜಿಲ್ಲಾ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ಸೆ.9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗುವುದು.

ಪುತ್ತೂರು ನಗರ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಾಲಕಿಯು 2025ರ ಮಾರ್ಚ್‌ನಿಂದ ಆರೋಪಿಯ ಜೊತೆ ತನ್ನ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಳು. ಸಲುಗೆ ಮಿತಿ ಮೀರಿ ಬಾಲಕಿಯನ್ನು ಭೇಟಿಯಾಗಲು ರೈಲ್ವೆ ಟ್ರಾಕ್ ಬಳಿ ಗುಡ್ಡ ಪ್ರದೇಶಕ್ಕೆ ಬರುವಂತೆ ಆರೋಪಿ ತಿಳಿಸಿದ್ದು, ಅದರಂತೆ ಬಾಲಕಿ ತೆರಳಿದಾಗ ಆತ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ಆ ಬಳಿಕವೂ ಆರೋಪಿ ಗುಡ್ಡ ಪ್ರದೇಶಕ್ಕೆ ಬರುವಂತೆ ಹೇಳಿ ಅನೇಕ ಬಾರಿ ಬಲವಂತದಿಂದ ದೈಹಿಕ ಸಂಪರ್ಕ ಮಾಡಿರುವುದಾಗಿ ಬಾಲಕಿ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿ ಮುರ ನಿವಾಸಿ ಸಫಾನ್ ಯಾನೆ ಅಫ್ಘಾನ್ ನನ್ನು ಪೊಲೀಸರು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Udupi: ಸೆ.13ರಂದು ಉಡುಪಿಯಲ್ಲಿ ಬೃಹತ್ ಉದ್ಯೋಗ ಮೇಳ

Comments are closed.