Fighter jet crash: ಎಫ್ -16 ಯುದ್ಧ ವಿಮಾನ ಪತನ – ಬೆಂಕಿಯ ಉಂಡೆಯಂತೆ ಕಾಣಿಸುವ ವಿಡಿಯೋ ಬೆಳಕಿಗೆ

Fighter jet crash: ಪೋಲೆಂಡ್‌ನ ರಾಡೋಮ್‌ನಲ್ಲಿ ನಡೆದ ವೈಮಾನಿಕ ಪ್ರದರ್ಶನದ ಪೂರ್ವಾಭ್ಯಾಸದ ವೇಳೆ ಪೋಲಿಷ್ ವಾಯುಪಡೆಯ ಎಫ್-16 ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಪೈಲಟ್ ಸಾವನ್ನಪ್ಪಿದ್ದಾರೆ. ಜೆಟ್ ಬ್ಯಾರೆಲ್ ರೋಲ್ ಸ್ಕಿಲ್ ಪ್ರದರ್ಶಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದ್ದು, ನಂತರ ರನ್‌ವೇಗೆ ಅಪ್ಪಳಿಸಿ ಬೆಂಕಿಯುಂಡೆಯಾಗಿ ಮಾರ್ಪಟ್ಟಿದೆ. ವಾರಾಂತ್ಯದಲ್ಲಿ ನಡೆಯಬೇಕಿದ್ದ ರಾಡೋಮ್ ಏರ್ ಶೋ ಅನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ.

ಸಾವನ್ನಪ್ಪಿದ “ಪೋಲಿಷ್ ಸೇನೆಯ ಪೈಲಟ್, ಯಾವಾಗಲೂ ತಮ್ಮ ದೇಶಕ್ಕೆ ಸಮರ್ಪಣಾಭಾವ ಮತ್ತು ಧೈರ್ಯದಿಂದ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಯಾಗಿದ್ದರು. ನಾನು ಅವರ ಸ್ಮರಣೆಗೆ ಗೌರವ ಸಲ್ಲಿಸುತ್ತೇನೆ” ಎಂದು ಅಪಘಾತದ ಸ್ಥಳಕ್ಕೆ ಬಂದ ನಂತರ ರಕ್ಷಣಾ ಸಚಿವ ವ್ಲಾಡಿಸ್ಲಾವ್ ಕೊಸಿನಿಯಾಕ್-ಕಾಮಿಸ್ಜ್ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಪೋಜ್ನಾನ್ ಬಳಿಯ 31 ನೇ ಟ್ಯಾಕ್ಟಿಕಲ್ ಏರ್ ಬೇಸ್‌ನ ವಿಮಾನ ಅಪಘಾತದಲ್ಲಿ, ಅಲ್ಲಿ ನಿಂತಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ತಿಳಿಸಿದೆ. “ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಗಿದೆ. ಪೋಲಿಷ್ ಮಾಧ್ಯಮಗಳು ಪಡೆದ ದೃಶ್ಯಗಳಲ್ಲಿ F-16 ಬ್ಯಾರೆಲ್ ರೋಲ್ ಏರೋಬ್ಯಾಟಿಕ್ ಕುಶಲತೆಯನ್ನು ಪ್ರದರ್ಶಿಸಿ, ನಂತರ ಅದು ನೆಲದ ಮೇಲೆ ಜಾರಿದಾಗ ಬೆಂಕಿ ಉಂಡೆಯಾಗಿ ಅಪ್ಪಳಿಸುವ ದೃಶ್ಯ ಕಂಡುಬಂದಿದೆ.
Solar Eclipse: ಸೆ. 7ಕ್ಕೆ ಚಂದ್ರಗ್ರಹಣ: ಸೆ. 21ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ : ಯಾವ ದೇಶಗಳಲ್ಲಿ ಗೋಚರಿಸಲಿದೆ?
Comments are closed.