Amith Shah: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ ನೀಡಿದ್ದೇಕೆ? ಕೊನೆಗೂ ಸ್ಪಷ್ಟಿಕರಣ ಕೊಟ್ಟ ಅಮಿತ್ ಶಾ

Share the Article

 

Amith Shah: ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ ನೀಡಿದ ವಿಚಾರ ದೇಶದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು. ಜಗದೀಫ್ ಅವರು ಅನಾರೋಗ್ಯ ಕಾರಣವನ್ನು ನೀಡಿ ರಾಜೀನಾಮೆ ನೀಡಿದ್ದೇನೆ ಎಂದೂ ಹೇಳಿದರೂ ಕೂಡ ಬೇರೆಯೇ ಕಾರಣ ಇದೆ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು. ಇದೀಗ ಈ ಕುರಿತು ಕೇಂದ್ರ ಗ್ರಾಮ ಮಂತ್ರಿ ಅಮಿತ್ ಶಾ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಹಠಾತ್ ರಾಜೀನಾಮೆಯ ಬಗ್ಗೆ ಹೆಚ್ಚುತ್ತಿರುವ ರಾಜಕೀಯ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಧನ್ಕರ್ ಅವರು ವೈಯಕ್ತಿಕ ಆರೋಗ್ಯ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ “ಧನ್ಕರ್ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿದ್ದರು, ಮತ್ತು ಅವರ ಅಧಿಕಾರಾವಧಿಯಲ್ಲಿ ಅವರು ಸಂವಿಧಾನದ ಪ್ರಕಾರ ಉತ್ತಮ ಕೆಲಸ ಮಾಡಿದರು. ವೈಯಕ್ತಿಕ ಆರೋಗ್ಯ ಸಮಸ್ಯೆಯಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ. ಅದನ್ನು ಹೆಚ್ಚು ವಿಸ್ತರಿಸಲು ಮತ್ತು ಏನನ್ನಾದರೂ ಕಂಡುಹಿಡಿಯಲು ಪ್ರಯತ್ನಿಸಬಾರದು. ‘ಪ್ರತಿಪಕ್ಷಗಳ ಆರೋಪಗಳ ಮೇಲೆ ಸತ್ಯವನ್ನು ಆಧಾರವಾಗಿಟ್ಟುಕೊಳ್ಳಬೇಡಿ ಎಂದೂ ಹೇಳಿದರು.

Comments are closed.