Elephant Attack: ಕಾಫಿ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ – ಬೆಟಗೇರಿಯಲ್ಲಿ ಕಾಡಾನೆಗಳ ಹಾವಳಿ

Share the Article

Elephant Attack: ಅಂಗಳದಲ್ಲಿ ಚೆಲ್ಲಾಪಿಲ್ಲಿಯಾಗಿರುವ ಹೂವು ಕುಂಡಗಳು, ಮನೆಯ ಗೋಡೆಗಳಿಗೆ ತಿವಿತ, ಮುರಿದು ಬಿದ್ದಿರುವ ಬಾಸ್ಕೆಟ್ ಬಾಲ್ ಪೋಲ್, ಕಾಫಿ-ಹಣ್ಣಿನ ಗಿಡಗಳು ಸರ್ವನಾಶ, ಎಲ್ಲೆಂದರಲ್ಲಿ ಆನೆಯ ಲದ್ದಿ. ಹೌದು ಇದು ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ವಂದನಾಪುರ ಕಾಫಿ ಎಸ್ಟೇಟ್ ಮನೆಯ ಆವರಣದಲ್ಲಿ ಕಂಡು ಬಂದ ದೃಶ್ಯಗಳು.

ಕಳೆದ ರಾತ್ರಿ ಹೊತ್ತಿನಲ್ಲಿ ಆನೆಗಳ ಹಿಂಡು ಮನೆಯ ಅವರಣಕ್ಕೆ ಪ್ರವೇಶಿಸಿದ್ದು, ಆನೆಗಳ ಆರ್ಭಟಕ್ಕೆ ಧ್ವoಸ ಗೊಂಡಿರುವ ವಸ್ತುಗಳು ಸಾಕ್ಷಿ ಹೇಳುತ್ತಿವೆ. ದಾಳಿ ಬಳಿಕ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದ್ದು, ಆಗಿರುವ ನಷ್ಟ ಅರಣ್ಯ ಇಲಾಖೆ ತುಂಬಲಿದೆಯೇ ಎನ್ನುವುದು ಎದ್ದಿರುವ ಪ್ರಶ್ನೆ.

ಇತ್ತ ನಾಪೋಕ್ಲುವಿನ ಬೆಟಗೇರಿ ಗ್ರಾಮದ ಕಾಫಿ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳು ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿದೆ. ಬೆಟಗೇರಿ ಗ್ರಾಮದ ಕಾಫಿ ಬೆಳೆಗಾರ ಚೌಂಡಿರ ಕುಮಾರ್, ಪಟ್ಟಡ ಗಣಿ ಸೇರಿದಂತೆ ಗ್ರಾಮದ ಹಲವು ಬೆಳೆಗಾರರ ತೋಟಗಳಿಗೆ ದಾಳಿ ನಡೆಸಿರುವ ಕಾಡಾನೆ ಗಳು ಬಾಳೆ, ಕಾಫಿ ಅಡಿಕೆ, ತೆಂಗಿನ ಗಿಡಗಳನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ.

ಸುಮಾರು 1.5 ಲಕ್ಷ ರೂ. ಬಾಳೆ ಹಾಗೂ ಕಾಫಿ ಪಸಲು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬೆಟಗೇರಿ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಜನರು ಭಯಬೀತರಾಗಿದ್ದಾರೆ. ಕಾರ್ಮಿಕರು ತೋಟಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಭಯದ ವಾತಾವರಣ ಸೃಷ್ಟಿಯಾಗಿದ್ದು ಕೂಡಲೇ ಕಾಡಾನೆಗಳ ಸಂಬಂಧ ತೋಟಗಳಿಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಬೆಳೆಗಾರರು ಒತ್ತಾಯಿಸಿದರು.

Fancy Number: ಕಾರಿನ ಫ್ಯಾನ್ಸಿ ನೋಂದಣಿ ಸಂಖ್ಯೆಯ ಹರಾಜು : ವಾಹನ ಸಂಖ್ಯೆಗಾಗಿ ಇಷ್ಟೊಂದು ಬೆಲೆಯೇ?

Comments are closed.