Human Body: ಭವಿಷ್ಯದಲ್ಲಿ ಮಾನವ ದೇಹದಿಂದ ಕಣ್ಮರೆಯಾಗಲಿವೆ ಈ 5 ಅಂಗಗಳು !!

Human Body: ಆಧುನಿಕ ಜೀವನಶೈಲಿ, ಬದಲಾದ ಆಹಾರ ಪದ್ಧತಿ, ಮತ್ತು ದಿನದಿಂದ ದಿನಕ್ಕೆ ಬರುತ್ತಿರುವ ಹೊಸ ತಂತ್ರಜ್ಞಾನ, ತಂತ್ರಜ್ಞಾನದಲ್ಲಿನ ಬದಲಾವಣೆಗಳು ಮಾನವ ದೇಹದ ಮೇಲೆ ಆಳವಾದ ಪರಿಣಾಮ ಬೀರುತ್ತಿವೆ. ಇದು ಮುಂದುವರಿದರೆ ಮಾನವನ ಭವಿಷ್ಯದಲ್ಲಿ ಕೆಲವು ಅಂಗಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಹೌದು, ವೈದ್ಯಕೀಯ ಕ್ಷೇತ್ರದಲ್ಲಿ ಆದಂತಹ ಸಾಕಷ್ಟು ಬದಲಾವಣೆಗಳು, ಆದ ಹೊಸ ಆವಿಷ್ಕಾರಗಳು, ಸುಧಾರಿತ ಆಹಾರ ಕ್ರಮಗಳು ನಮ್ಮ ದೇಹದ ಅಂಗರಚನೆಯ ಮೇಲೆ ಪ್ರಭಾವ ಬೀರುತ್ತಿವೆ. ಪ್ರಮುಖ ಪಾತ್ರ ವಹಿಸುತ್ತಿದ್ದ ಕೆಲವು ಅಂಗಗಳು ಈಗ ಬಹುತೇಕ ನಿಷ್ಪ್ರಯೋಜಕವಾಗಿವೆ, ಮತ್ತು ಕಾಲಾನಂತರದಲ್ಲಿ ಅವು ಅಳಿದುಹೋಗಬಹುದು. ಸಂಶೋಧಕರು ಈ ಬದಲಾವಣೆಗಳ ಮೇಲೆ ಅಧ್ಯಯನ ನಡೆಸುತ್ತಿದ್ದಾರೆ. ಅಂತಹ ಐದು ದೇಹದ ಭಾಗಗಳ ಪಟ್ಟಿ ಇಲ್ಲಿದೆ.
ಕೂದಲು : ಮೊದಲು ದೇಹದ ಕೂದಲು ಪರಿಸರದಿಂದ ರಕ್ಷಣೆ ನೀಡುತ್ತಿತ್ತು ಮತ್ತು ದೇಹವನ್ನು ಬೆಚ್ಚಗಿಡುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಬಟ್ಟೆ ಮತ್ತು ಬಿಸಿಯಾದ ಮನೆಗಳ ಕಾರಣದಿಂದ ಇದರ ಅಗತ್ಯ ಕಡಿಮೆಯಾಗಿದೆ. ಶೇ.90 ಕ್ಕೂ ಹೆಚ್ಚು ಮಹಿಳೆಯರು ಸೌಂದರ್ಯ ಮತ್ತು ಸ್ವಚ್ಛತೆಗೆ ದೇಹದ ಕೂದಲನ್ನು ತೆಗೆದುಹಾಕುತ್ತಾರೆ.
ದವಡೆ ಹಲ್ಲು : ಕಚ್ಚಾ ಆಹಾರವನ್ನು ಜಗಿಯಲು 3ನೇ ದವಡೆ ಹಲ್ಲು ಸಹಾಯ ಮಾಡುತ್ತಿತ್ತು. ಈಗ ಮೃದುವಾದ ಮತ್ತು ಬೇಯಿಸಿದ ಆಹಾರಗಳಿಂದ ಇದರ ಅಗತ್ಯ ಇಲ್ಲದಂತಾಗಿದೆ. ಭವಿಷ್ಯದಲ್ಲಿ ಮಾನವನ ದೇಹದಲ್ಲಿ ಈ ಹಲ್ಲುಗಳು ಬೆಳೆಯದೇ ಇರಬಹುದು.
ಬೆನ್ನುಮೂಳೆ: ಬೆನ್ನುಮೂಳೆಯ ಕೆಳಭಾಗದಲ್ಲಿರುವ ಟೈಲ್‌ಬೋನ್ ಲಕ್ಷಾಂತರ ವರ್ಷಗಳ ಹಿಂದೆ ಬಾಲದ ಅವಶೇಷ. ಈಗ ಇದು ಕೆಲ ಸ್ನಾಯುಗಳಿಗೆ ಮಾತ್ರ ಬೆಂಬಲ ನೀಡುತ್ತದೆ. ಅದರ ಪ್ರಮುಖ ಉಪಯೋಗ ಕಡಿಮೆಯಾಗಿರುವುದರಿಂದ, ಮುಂದಿನ ಪೀಳಿಗೆಯಲ್ಲಿ ಇದು ಮರೆಯಾಗುವ ಸಾಧ್ಯತೆ ಇದೆ.
ಹಿಂದೆ, ಸಸ್ಯಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತಿದ್ದ ಅಪೆಂಡಿಕ್ಸ್ ಈಗಿನ ಆಹಾರ ಪದ್ಧತಿಯಲ್ಲಿ ನಿಷ್ಪ್ರಯೋಜಕವಾಗಿದೆ. ವೈದ್ಯಕೀಯ ಅಧ್ಯಯನಗಳು ಇದರ ಸಣ್ಣ ಪಾತ್ರವನ್ನು ಸೂಚಿಸಿದರೂ, ಇದು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯಿಂದ ತೆಗೆಯಲ್ಪಡುತ್ತದೆ. ಭವಿಷ್ಯದಲ್ಲಿ ಮಾನವ ದೇಹದಿಂದ ಇದು ಸಂಪೂರ್ಣವಾಗಿ ಕಣ್ಮರೆಯಾಗಬಹುದು.
ಹಿಂದಿನ ಕಾಲದಲ್ಲಿ ಪ್ರಾಣಿಗಳಂತೆ ಶಬ್ದದ ಮೂಲದ ಕಡೆಗೆ ಕಿವಿಯನ್ನು ತಿರುಗಿಸಲು ಈ ಸ್ನಾಯುಗಳು ಸಹಾಯ ಮಾಡುತ್ತಿದ್ದವು. ಈಗ ಅವುಗಳ ಕೆಲಸ ಬಹುತೇಕ ಇಲ್ಲ. ಕೆಲವೇ ಕೆಲವು ಜನರು ಮಾತ್ರ ಇವುಗಳನ್ನು ನಿಯಂತ್ರಿಸಬಲ್ಲರು. ಈ ಸ್ನಾಯುಗಳ ಅಗತ್ಯ ಕಡಿಮೆಯಾಗಿರುವುದರಿಂದ, ಭವಿಷ್ಯದಲ್ಲಿ ಇವುಗಳೂ ಮಾಯವಾಗಬಹುದು.
Deepika Das: ಇನ್ಸ್ಟಾ ಸ್ಟೋರಿ ಹಾಕಿ ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ಖಡಕ್ ವಾರ್ನಿಂಗ್!!
Comments are closed.