Dog neuter: ಬೀದಿ ನಾಯಿಗಳ ಹಾವಳಿ ತಡೆಗೆ ಸುಪ್ರೀಂ ಕೋರ್ಟ್ ಆದೇಶ – ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಸಂತಾನಹರಣಕ್ಕೆ ಎಷ್ಟು ವೆಚ್ಚವಾಗುತ್ತೆ?

Share the Article

Dog neuter: ನ್ಯೂಸ್ 18 ಪ್ರಕಾರ, ದೆಹಲಿ-ಎನ್‌ಸಿಆರ್‌ನಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 8 ಲಕ್ಷವಾಗಿದ್ದು, ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಅವುಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸುಮಾರು ₹2,400 ಕೋಟಿ ವೆಚ್ಚವಾಗಲಿದೆ. ನಾಯಿಗಳ ಸಂತಾನಹರಣ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಆರೈಕೆಗೆ ₹3,000-₹5,000 ಮತ್ತು ಹೆಣ್ಣು ನಾಯಿಗಳಿಗೆ ₹8,000-₹9,000 ವೆಚ್ಚವಾಗುತ್ತದೆ ಎಂದು ದೆಹಲಿಯ ಸಣ್ಣ ಪ್ರಾಣಿ ಪಶುವೈದ್ಯಕೀಯ ಸಂಘದ ಸದಸ್ಯ ಡಾ.ಶಿವಂ ಪಟೇಲ್ ಹೇಳಿದ್ದಾರೆ.

ಈಗಾಗಲೆ ನಾಯಿಗಳ ಹಾವಳಿ ತಡೆಗೆ ನಿರ್ದಿಷ್ಟ ನೀತಿ ರೂಪಿಸಿ ರಾಜಧಾನಿ ದೆಹಲಿ ಮತ್ತು NCR ವಲಯದ ಎಲ್ಲ ಪ್ರದೇಶದಿಂದ ಬೀದಿ ನಾಯಿಗಳನ್ನು ಹಿಡಿದು ಶೆಡ್‌ಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗೆ ಇದು ಕೇವಲ ದೆಹಲಿಗೆ ಮಾತ್ರ ಅನ್ವಯವಾಗದೇ ಇಡೀ ದೇಶಕ್ಕೆ ಅನವಯವಾಘುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆ-1960 ಹಾಗೂ ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು-2023 (ABC) ರೀತಿಯ ಕಾನೂನುಗಳು, ಪ್ರಾಣಿಗಳು ಮತ್ತು ಸಾಕು ಪ್ರಾಣಿಗಳನ್ನು ಹೇಗೆ ನಾವು ಸಾಕಬೇಕು ಮತ್ತು ಅವುಗಳನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದನ್ನು ಸ್ಪಷ್ಟಪಡಿಸಿವೆ.

ಈ ಕಾನೂನು ಪ್ರಾಣಿಗಳ ಹಕ್ಕುಗಳ ಹಾಗೂ ಮನುಷ್ಯರ ಹಿತರಕ್ಷಣೆ ಮಧ್ಯೆ ಹೇಗೆ ಸಮತೋಲನ ಸಾಧಿಸುವುದು ಅನ್ನುವ ಬಗ್ಗೆ ಹೇಳುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ನ್ಯಾ. ಜೆ.ಬಿ ಪಾರ್ದಿವಾಲಾ ಮತ್ತು ಆರ್.‌ ಮಹಾದೇವನ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಬೀದಿನಾಯಿಗಳ ನಿಯಂತ್ರಣಕ್ಕೆ ಈ ಆದೇಶ ಜಾರಿ ಮಾಡಿದೆ. ದೇಶದಾದ್ಯಂತ ಸಾಮಾನ್ಯ ನಾಗರೀಕರಿಗೆ ಹಾಗೂ ಪ್ರಾಣಿ ಪ್ರಿಯರಿಗೆ ಬೇಜಾರಾಗದಂತೆ ಒಂದಷ್ಟು ನೀತಿಗಳನ್ನು ರೂಪಿಸಿ ಆದೇಶವನ್ನು ಪೀಠ ನೀಡಿದೆ.

Comments are closed.