Air Show: ದಸರಾ ಮಹೋತ್ಸವ – ಸೆ.27ಕ್ಕೆ ಏರ್ ಶೋ – ಕೇಂದ್ರ ಸಮ್ಮತಿ – ಯಾವೆಲ್ಲಾ ಉಕ್ಕಿನ ಹಕ್ಕಿಗಳು ಹಾರಲಿವೆ?

Air Show: ಈ ಸಾಲಿನ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಲೋಹದ ಹಕ್ಕಿಗಳ ಸಾಹಸ ಪ್ರದರ್ಶನವಿದೆ. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆಯ ಸಾರಂಗ್ ತಂಡದಿಂದ ಮೈನ ವಿರೇಳಿಸುವ ವೈಮಾನಿಕ ಪ್ರದರ್ಶನವಿದೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಸೆ.22 ರಂದು ಆರಂಭವಾಗಲಿದ್ದು, ಅ.2ರಂದು ಜಂಬೂಸವಾರಿ ಮೆರವಣಿಗೆ ನೆರವೇರಲಿದೆ. ದಸರಾದ ಆಕರ್ಷಣೀಯ ಕಾರ್ಯಕ್ರಮದಲ್ಲಿ ಏರ್ ಶೋ ಒಂದಾಗಿದ್ದು, ಅಪಾರ ಸಂಖ್ಯೆಯ ವೀಕ್ಷಕರು ಆಗಸದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ಕಣ್ಣುಂಬಿಕೊಳ್ಳಲು ತವಕಿಸುತ್ತಿದ್ದಾರೆ.
ಕಳೆದ ವರ್ಷ ಏರ್ ಶೋ ಇರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ವೈಮಾನಿಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿ ಸಿದ ಕೇಂದ್ರ, ವೈಮಾನಿಕ ಪ್ರದರ್ಶನಕ್ಕೆ ಒಪ್ಪಿಗೆ ನೀಡಿದೆ. 2023ರಲ್ಲಿ ವೈಮಾನಿಕ ಪ್ರದರ್ಶನ ನಡೆದಿತ್ತು. ಆದರೆ ಕಳೆದ ವರ್ಷ ಏರ್‌ಶೋಗೆ ಕೇಂದ್ರ ಅನುಮತಿ ನಿರಾಕರಿಸಿತ್ತು.
ವಾಯುಪಡೆಯ ಐಎಎಫ್‌ನ ಸಾರಂಗ್ ತಂಡ ವೈಮಾನಿಕ ಸಾಹಸ ಪ್ರದರ್ಶನ ನೀಡಲಿದೆ. ಅಲ್ಲದೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎಎಲ್) ಅಭಿವೃದ್ಧಿಪಡಿಸಿದ ಧ್ರುವ ಹೆಲಿಕಾಪ್ಟರ್ ಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ದಸರಾ ವೇಳೆ ಏರ್‌ಶೋ ವೇಳೆ ಫೈಟರ್ ಜೆಟ್‌ಗಳು ಪಾಲ್ಗೊಳ್ಳುವ ಸಂಬಂಧ ಜಿಲ್ಲಾಡಳಿತ ರಕ್ಷಣಾ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದೆ. ಈ ಬಾರಿಯ ಸಾಹಸ ಪ್ರದರ್ಶನ ಹೆಚ್ಚು ಆಕರ್ಷಕವಾಗಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು.
ರಕ್ಷಣಾ ಸಚಿವರಿಗೆ ಆಹ್ವಾನ: ಮುಖ್ಯಮಂತ್ರಿ ಸಿದ್ದರಾಮಯ್ಯ, ದಸರಾ ಮಹೋ ತ್ಸವದಲ್ಲಿ ತಾವೂ ಪಾಲ್ಗೊಳ್ಳುವಂತೆಯೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಿದ್ದಾರೆ. ನಿಮ್ಮ ಉಪಸ್ಥಿತಿ ಕರ್ನಾ ಟಕದ ನಾಗರಿಕರಿಗೆ ಸಂತಸ ತರಲಿದೆ. ಅಲ್ಲದೆ, ಭಾರತೀಯ ಸೇನೆ, ಸಶಸ್ತ್ರ ಪಡೆಗಳ ಬಗ್ಗೆ ಜನರಲ್ಲಿರುವ ಗೌರವ ಮತ್ತು ಮೆಚ್ಚುಗೆಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದಿದ್ದಾರೆ.
Comments are closed.