Kodagu: ಬಾಂಗ್ಲಾ ವಲಸಿಗರು, ರೋಹಿಂಗ್ಯಾಗಳಿಂದ ಕೊಡವ ಭೂಮಿಗೆ ಅಪಾಯ: ನೆಲೆ ಕಲ್ಪಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹುನ್ನಾರ – ಎನ್.ಯು. ನಾಚಪ್ಪ

Kodagu: ಮತ ಬ್ಯಾಂಕ್‌ಗಾಗಿ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಾ ಗಳಿಗೆ ಪವಿತ್ರ ಕೊಡವ ಲ್ಯಾಂಡ್‌ನಲ್ಲಿ ನೆಲೆ ಕಲ್ಪಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹುನ್ನಾರ ನಡೆಯುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭದಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸಿದ್ದಾಪುರದಲ್ಲಿ 10ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಚಪ್ಪ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾಗಳಿಂದ ಕೊಡವ ಲ್ಯಾಂಡ್‌ಗೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಅವರ ಇರುವಿಕೆಯನ್ನು ಸಕ್ರಮಗೊಳಿಸುವ ಮತ್ತು ಕೊಡವ ನೆಲದಲ್ಲಿ ನೆಲೆ ನೀಡುವ ಪ್ರಯತ್ನಗಳು ನಡೆಯುತ್ತಿದೆ. ಕೊಡವ ನೆಲದ ಆಯಕಟ್ಟಿನ ಜಾಗಗಳಲ್ಲಿ ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಎನ್ನುವ ನಕಲಿ ಹೊದಿಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಸಿದ್ದಾಪುರದಲ್ಲಿ 10ನೇ ಮಾನವ ಸರಪಳಿ ಜನಜಾಗೃತಿ ನಡೆಸಲಾಯಿತು.
ಹಾಕಿ ನೂರಾರು ಏಕರೆ ಜಾಗವನ್ನು ಮಂಜೂರು ಮಾಡಲು ಹವಣಿಸಲಾಗು ತ್ದೆ ಎಂದು ಅವರು ಹೇಳಿದರು. ಈ ಪ್ರಯತ್ನ ಜನಸಂಖ್ಯಾ ಪಲ್ಲಟಕ್ಕೆ ಕಾರಣವಾಗಲಿದ್ದು, ಇದು ಆತಂಕಕಾರಿ ಬೆಳವಣಿಗೆ ಯಾಗಿದೆ. ಕೊಡವ ನೆಲದ ನಿಜ ವಾರಸುದಾರರಾದ ಕೊಡವರನ್ನು ಮತದಾರರ ಪಟ್ಟಿ ಯಿಂದ ಕೈಬಿಟ್ಟು ಬಾಂಗ್ಲಾ ಮತ್ತು ಮಾಯ ನ್ಯಾರ್‌ನ ರಾಖಿನೆ ಪ್ರಾಂತ್ಯದ ರೋಹಿಂಗ್ಯಾ ಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಸಂಚು ನಡೆದಿದೆ ಎಂದು ಆರೋಪಿಸಿದರು.
ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
2026ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನಡಿ ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ ನಂದಿನೆರವಂಡ ರೇಖಾ ನಾಚಪ್ಪ ಕಾವಡಿಚಂಡ ಕಮಲಾ, ಕಮೋಡೋರ್ ಕುಕ್ಕೇರ ಕೇಶು ಉತ್ತಪ್ಪ, ಕುಕ್ಕೇರ ಜಯ ಚಿಣ್ಣಪ್ಪ, ಚೇರಂಡ ಸುಭಾಷ್, ಚೇಂದಂಡ ಚುಮ್ಮಿ ಪೂವಯ್ಯ, ಪಾಲಚಂಡ ಜಾಲಿ ತಮ್ಮಯ್ಯ, ಕಾಡುಮಂಡ ತಮ್ಮಯ್ಯ, ಮೂಕೊಂಡ ದಿಲೀಪ್, ಅಜ್ಜಿನಿಕಂಡ ಸನ್ನಿ, ನೆಲ್ಲಮಕ್ಕಡ ವಿವೇಕ್ ಮತ್ತಿತರರು ಪಾಲ್ಗೊಂಡಿದ್ದರು.
Comments are closed.