Mysore Dasara: ಅರಮನೆ ಆವರಣದಲ್ಲಿ ಜಂಬೂ ಸವಾರಿ ವೀಕ್ಷಣೆಗೆ 48,000 ಮಂದಿಗೆ ಅವಕಾಶ – ಈ ಸಂಖ್ಯೆಯಲ್ಲಿ ಒಂದೇ ಒಂದು ಹೆಚ್ಚಾಗಲು ಬಿಡಲ್ಲ: ಡಿಸಿ

Share the Article

Mysore Dasara: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾರಿ ಜನದಟ್ಟಣೆ. ನೂಕು-ನುಗ್ಗಲು ನಿಯಂತ್ರಣಕ್ಕೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಪಿ) ಅಳವಡಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆರಮನೆ ಆವರಣದಲ್ಲಿ 48 ಸಾವಿರ ಮಂದಿಗೆ ಮಾತ್ರವೇ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸೇಡಿಯಂ ಬಳಿ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತ ದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಬೃಹತ್ ಕಾರ್ಯ ಕ್ರಮಗಳು ಮತ್ತು ಸಾರ್ವ ಜನಿಕ ಸಮಾರಂಭಗಳಲ್ಲಿ ಜನ ಸಂದಣಿ ನಿರ್ವಹಣೆಗಾಗಿ ಎಸ್‌ಪಿ ಜಾರಿ ಮಾಡಿದ್ದು, ಲಕ್ಷಾಂತರ ಜನ ಸೇರುವ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಯನ್ನು ವ್ಯವಸ್ಥಿತವಾಗಿ, ಯಾವುದೇ ಗೊಂದಲ-ಗೋಜುಗಳಿಲ್ಲದೆ ನಡೆಸುವಂತೆ ಸೂಚಿಸಲಾಗಿದೆ.

ಎಸ್‌ಪಿ ಮಾರ್ಗಸೂಚಿ ಯಂತೆ ಜಂಬೂಸವಾರಿ ದಿನದಂದು ಅರಮನೆ ಆವರಣದಲ್ಲಿ ಈ ವರ್ಷ 48 ಸಾವಿರ ಮಂದಿಗೆ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಿದ್ದು, ಕಳೆದ ವರ್ಷಕ್ಕಿಂತ 11 ಸಾವಿರ ಜನರ ಕಡಿತಗೊಳಿಸಲಾಗಿದೆ ಎಂದು ‘ಮೈಸೂರು ಮಿತ್ರೆನಿಗೆ ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಕಾಂತ್ ರೆಡ್ಡಿ ಮಾಹಿತಿ ನೀಡಿದರು. ಕಳೆದ ವರ್ಷ ಆರಮನೆ ಆವರಣದಲ್ಲಿ 59 ಸಾವಿರ ಮಂದಿಗೆ ಅವಕಾಶ ನೀಡಲಾಗಿತ್ತು. ಈ ವರ್ಷ ಸರ್ಕಾರದ ಮಾರ್ಗಸೂಚಿಯಂತೆ ಎಸ್‌ಪಿ ಜಾರಿ ಮಾಡಲಿದ್ದು, ಜನಸಂದಣಿ, ನೂಗು-ನುಗ್ಗಲನ್ನು ನಿಯಂತ್ರಿಸುವ ದೃಷ್ಟಿಯಿಂದ ಕಡಿಮೆ ಮಾಡಲಾಗಿದೆ.

ವೆಬ್‌ಸೈಟ್ ಮೂಲಕ ಗೋಲ್ಡ್ ಕಾರ್ಡ್ ಮಾರಾಟ…!

ಮೈಸೂರು ದಸರಾ ಸಂಬಂಧಿತ ಎಲ್ಲಾ ಕಾರ್ಯಚಟುವಟಿಕೆ ‘ಗಳನ್ನು ಹಂತ ಹಂತವಾಗಿ ರೂಪಿಸಲಾಗುತ್ತಿದ್ದು, ಪ್ರತೀ ವರ್ಷದಂತೆ ಮುಂದಿನ 10-15 ದಿನಗಳ ನಂತರ ಆನ್ ಲೈನ್ ಮೂಲಕ ಗೋಲ್ಡ್ ಕಾರ್ಡ್ ಮಾರಾಟ ಪ್ರಾರಂಭಿಸಲಾಗುವುದು. ಈ ಕುರಿತು Aಗಾಗ ಅಪ್ಡೆಟ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ, ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

Legislative Assembly: ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣ, ಸದನದಲ್ಲಿ ಭಾರೀ ಗದ್ದಲ: ಉತ್ತರ ಕೊಡಿ ಎಂದು ಪಟ್ಟು ಹಿಡಿದ ಬಿಜೆಪಿ ಶಾಸಕರು

Comments are closed.