Dharmasthala : ಧರ್ಮಸ್ಥಳ ಹಿಂದೂ ದೇವಾಲಯವಾದರೂ ಜೈನರು ಪೂಜಿಸೋದು ಏಕೆ? ವೀರೇಂದ್ರ ಹೆಗ್ಗಡೆ ಸ್ಪಷ್ಟೀಕರಣ

Share the Article

 

Dharmasthala : ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೆಲವು ಅಪರಾಧ ವಿಚಾರಗಳ ಕುರಿತು ಸದ್ಯ ಎಸ್ಐಟಿ ತನಿಖೆ ನಡೆಸುತ್ತಿದೆ. ಇದರ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳವು ಹಿಂದೂ ದೇವಾಲಯ, ಆದರೆ ಇಲ್ಲಿ ಜೈನರ ಆಡಳಿತವಿದೆ. ಇದು ಏಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಈ ಕುರಿತು ಸ್ವತಃ ವೀರೇಂದ್ರ ಹೆಗ್ಗಡೆಯವರೇ ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣದ ಬಗ್ಗೆ ಮೊದಲ ಬಾರಿ ಮಾಧ್ಯಮಕ್ಕೆ ಸಂದರ್ಶನ ನೀಡಿದ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹಿಂದೂ ದೇಸ್ಥಾನವನ್ನು ಜೈನರು ಪೂಜೆ ಮಾಡುವುದು ಯಾಕೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 ಈ ಕುರಿತಾಗಿ ಮಾತನಾಡಿದ ಅವರು ಜೈನರಾಗಿ ಹಿಂದೂ ದೇವಾಲಯವನ್ನು ಮುನ್ನಡೆಸುವುದು ವಿವಾದಾತ್ಮಕವಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ಜೈನ ಕುಟುಂಬಗಳು ನಿರ್ವಹಿಸುತ್ತಿವೆ. ಇದು ಹಳೆಯ ಸಂಪ್ರದಾಯ. ಕರಾವಳಿ ಭಾಗದಲ್ಲಿ ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿ ಜೈನರು, ಹಿಂದೂ ಎಂಬ ಭೇದ ಭಾವವಿಲ್ಲದೆ ದೇವರ ಸೇವೆಗಳು ನಡೆಯುತ್ತಿವೆ. ಎಲ್ಲರೂ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಇದು ಎಂದಿಗೂ ಸಮಸ್ಯೆಯಾಗಿರಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಆರೋಪಗಳ ನಡುವೆಯೂ, ದೇವಾಲಯದ ದೈನಂದಿನ ಚಟುವಟಿಕೆಗಳು ಮತ್ತು ಸಂಪ್ರದಾಯಗಳು ಎಂದಿನಂತೆ ನಡೆಯುತ್ತಿವೆ. ಭಕ್ತರ ನಂಬಿಕೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಆಚರಣೆಗಳು, ಕಾಣಿಕೆಗಳು ಮತ್ತು ಪದ್ಧತಿಗಳು ಎಂದಿನಂತೆ ನಡೆಯುತ್ತಿವೆ. ಕೆಲವು ಯುವಕರು ತಪ್ಪು ಮಾಹಿತಿಯಿಂದ ಪ್ರಭಾವಿತರಾಗಬಹುದು. ಆದರೆ, ಒಟ್ಟಾರೆಯಾಗಿ ನಂಬಿಕೆ ಬಲವಾಗಿದೆ ಎಂದು ಹೇಳಿದ್ದಾರೆ.

Comments are closed.