UP: ಯೋಧನಿಗೆ ಟೋಲ್ ಸಿಬ್ಬಂದಿಯಿಂದ ಪ್ರಕರಣ – ಕಂಪೆನಿಗೆ 20 ಲಕ್ಷ ರೂ. ದಂಡ ವಿಧಿಸಿ, ನಿಷೇಧ ಹೇರಿದ ಹೆದ್ದಾರಿ ಪ್ರಾಧಿಕಾರ!!

UP: ಟೋಲ್ ಸಿಬ್ಬಂದಿಗಳು ಯೋಧನೊಬ್ಬನನ್ನು ಹಿಗ್ಗಾಮುಗ್ಗಾವಾಗಿ ಥಳಿಸಿರುವ ಆಘಾತಕಾರಿ ಘಟನೆ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆ ಟೋಲ್ ಸಂಸ್ಥೆಗೆ 20 ಲಕ್ಷ ದಂಡವನ್ನು ವಿಧಿಸಿ ನಿಷೇಧವನ್ನು ಹೇಳಿದೆ.

ಹೌದು, ನಿನ್ನೆ ಶ್ರೀನಗರದಲ್ಲಿ ಕರ್ತವ್ಯಕ್ಕೆ ಮರಳಲು ತನ್ನ ಸೋದರಸಂಬಂಧಿಯೊಂದಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಕಪಿಲ್ ಕವಾಡ್ ಎಂಬ ಯೋಧನ ಮೇಲೆ ಹಲ್ಲೆ ನಡೆಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಯೋಧನನ್ನು ಹೊಡೆದು ಕಂಬಕ್ಕೆ ಕಟ್ಟಿ ಹಾಕುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ಈ ಪ್ರಕರಣದಲ್ಲಿ ಕನಿಷ್ಠ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಇದರ ಬೆನ್ನಿಗೇ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಟೋಲ್ ಸಂಗ್ರಹಿಸುವ ಕಂಪೆನಿಗೆ 20 ಲಕ್ಷ ರೂ. ದಂಡ ವಿಧಿಸಿದ್ದು, ಭವಿಷ್ಯದ ಟೋಲ್ ಪ್ಲಾಝಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಅದರ ಮೇಲೆ ನಿಷೇಧವನ್ನೂ ಹೇರಿದೆ.
ಇನ್ನು ‘ಗೋಟ್ಕಾ ಗ್ರಾಮದ ಯೋಧ ಕಪಿಲ್ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದರು. ಟೋಲ್ ಪ್ಲಾಜಾದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ಪರಿಣಾಮ ಕಪಿಲ್ ಅವರ ಕಾರು ದಟ್ಟನೆಯಲ್ಲಿ ಸಿಲುಕಿಕೊಂಡಿತ್ತು. ವಾಹನಗಳ ಸುಗಮ ಸಂಚಾರಕ್ಕೆ ತುರ್ತಾಗಿ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದರು. ಈ ವೇಳೆ ಕಪಿಲ್ ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಟೋಲ್ ಸಿಬ್ಬಂದಿ ಕಪಿಲ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಕಪಿಲ್ ಪರವಾಗಿ ಅವರ ಕುಟುಂಬದವರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈಗಾಗಲೇ ಆರು ಮಂದಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
Comments are closed.