Pak Flood: ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – ಕೊಚ್ಚಿ ಹೋದ ಇಡೀ ಪಟ್ಟಣ -330ಕ್ಕೂ ಹೆಚ್ಚು ಮಂದಿ ಸಾವು

Pak Flood: ಪಾಕಿಸ್ತಾನದ ವಾಯುವ್ಯ ಭಾಗದಲ್ಲಿ ಹವಾಮಾನ ಬದಲಾವಣೆಯಿಂದ ಉಂಟಾದ ಪ್ರವಾಹದಿಂದ ಕನಿಷ್ಠ 337 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಡಜನ್ ಗಟ್ಟಲೆ ಜನರು ಕಾಣೆಯಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಾಯುವ್ಯ ಪಾಕಿಸ್ತಾನದ ಪಾಕಿಸ್ತಾನ ಆಕ್ರಮಿತ ಖೈಬರ್ ಪುಂಖ್ಯಾ ಮತ್ತು ಪಿಒಕೆಯ ಕಾಶ್ಮೀರ, ಗಿಲ್ಲಿಟ್-ಬಾಲ್ಟಿಸ್ತಾನದಲ್ಲಿ ಮೇಘಸ್ಫೋಟ ಸಂಭವಿಸಿ ಉಂಟಾದ ಭೀಕರ ಪ್ರವಾಹದಲ್ಲಿ ಇಡೀ ಪಟ್ಟಣವೊಂದು ಕೊಚ್ಚಿಕೊಂಡು ಹೋಗಿದೆ.
ಕಿಶ್ಚಾರ್ ಜಿಲ್ಲೆಯಲ್ಲಿ, ತುರ್ತು ತಂಡಗಳು ಭಾನು ವಾರ ದೂರದ ಚೋಸಿಟಿ ಗ್ರಾಮದಲ್ಲಿ ರಕ್ಷಣಾ ಪ್ರಯತ್ನ ಗಳನ್ನು ಮುಂದುವರೆಸಿವೆ. ಇಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿ ಸುಮಾರು 150 ಜನರು ಗಾಯಗೊಂಡಿ ದ್ದಾರೆ. ಅವರಲ್ಲಿ ಸುಮಾರು 50 ಜನರು ಗಂಭೀರ ವಾಗಿ ಗಾಯಗೊಂಡಿದ್ದಾರೆ. ಪರ್ವತಗಳಿಂದ ಧಾವಿಸಿದ ನೀರಿನ ಪ್ರವಾಹದಿಂದ ಮನೆಗಳು ನೆಲಸಮಗೊಂಡ ಪ್ರದೇಶಗಳ ಮೇಲೆ ಶೋಧ ಕಾರ್ಯಗಳು ನಡೆಯುತ್ತಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪರ್ವತ ಜಿಲ್ಲೆಯಾದ ಬುನೇರ್‌ನಲ್ಲಿ ಗಂಟೆಗಳ ಕಾಲ ನಡೆಸಿದ ಪ್ರಯತ್ನದ ನಂತರ 54 ಶವಗಳು ಪತ್ತೆಯಾಗಿವೆ ಎಂದು ತುರ್ತು ಸೇವೆಯ ವಕ್ತಾರ ಮೊಹಮ್ಮದ್ ಸುಹೈಲ್ ತಿಳಿಸಿದ್ದಾರೆ. ಶುಕ್ರವಾರ ಧಾರಾಕಾರ ಮಳೆ ಮತ್ತು ಮೋಡದ ಸ್ಫೋಟದಿಂದಾಗಿ ಭಾರಿ ಪ್ರವಾಹ ಉಂಟಾಗಿತ್ತು.
ಇಂದಿನಿಂದ ಮಂಗಳವಾರದವರೆಗೆ ಹೆಚ್ಚಿನ ಪ್ರವಾಹ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದು, ಸ್ಥಳೀಯ ಆಡಳಿತಗಳು ಜಾಗರೂಕರಾಗಿರುವಂತೆ ಸೂಚಿಸಿದ್ದಾರೆ. ಜೂನ್ 26ರಿಂದ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿದ್ದು, 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕಡಿಮೆ ಸಮಯದಲ್ಲಿ ಸಣ್ಣ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಬೀದ್ದ ಪರಿಣಾಮ ಮೇಘಸ್ಫೋಟಗಳು ಸಂಭವಿಸಿ ಇತ್ತೀಚಿನ ದಿನಗಳಲ್ಲಿ ಭಾರತದ ಆಡಳಿತದಲ್ಲಿರುವ ಕಾಶ್ಮೀರದ ವಿನಾಶಕ್ಕೆ ಕಾರಣವಾಗಿವೆ.
Ganes Chaturthi 2025: ಗಣೇಶ ಚತುರ್ಥಿ ಆಗಸ್ಟ್ 27 ರಂದು ಪ್ರಾರಂಭ, ಮೊದಲ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?
Comments are closed.