Viral Video: ಅನಾರೋಗ್ಯ ಪೀಡಿತ ಪತ್ನಿಯನ್ನು ‘ಜೀವಂತ ಸಮಾಧಿ’ ಮಾಡಲು ಮುಂದಾದ ಮುದುಕ – ಭಯಾನಕ ವಿಡಿಯೋ ವೈರಲ್

Viral Video : ವೃದ್ಧನೊಬ್ಬ ಅನಾರೋಗ್ಯ ಪೀಡಿತಳಾದ ತನ್ನ ಹೆಂಡತಿಯನ್ನು ಜೀವಂತವಾಗಿ ಸಮಾಧಿ ಮಾಡಲು ಹೊರಟ ಅಘಾತಕಾರಿ ಘಟನೆ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ವ್ಯಕ್ತಿಯೊಬ್ಬ ತನ್ನ ಅನಾರೋಗ್ಯ ಪೀಡಿತ ಪತ್ನಿಯನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದಾನೆ ಎಂದು ಹೇಳಲಾದ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆರೋಪಿ 70 ವರ್ಷದ ಖಲೀಲುರ್ ರೆಹಮಾನ್, ಕಾಕಿಲಕುರಾ ಒಕ್ಕೂಟದ ಖೋಶಾಲ್ಪುರ್ ಕಣಿಪಾರ ಗ್ರಾಮದಲ್ಲಿರುವ ತನ್ನ ಮನೆಯ ಅಂಗಳದಲ್ಲಿ ಗುಂಡಿ ತೋಡಿ, ದೀರ್ಘಕಾಲದಿಂದ ಅಸ್ವಸ್ಥಳಾಗಿದ್ದ ತನ್ನ 65 ವರ್ಷದ ಪತ್ನಿ ಮೋಶಾ ಖೋರ್ಶೆದಾ ಬೇಗಂ ಅವರನ್ನು ಹೂಳಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಈ ಘಟನೆ ಕರ್ನಾಟಕದಲ್ಲಿ ನಡೆದಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ಈ ಘಟನೆ ನಡೆದಿದ್ದು ಬಾಂಗ್ಲಾದೇಶದಲ್ಲಿ ಎಂದು ಕೆಲವು ಮೂಲಗಳು ಸ್ಪಷ್ಟಪಡಿಸಿದೆ.
Comments are closed.