Donald Trump :’ನನಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡಿ, ಇಲ್ಲಾಂದ್ರೆ 15% ಟ್ಯಾಕ್ಸ್ ಹಾಕ್ತೀನಿ’ – ನಾರ್ವೆ ಸಚಿವರಿಗೆ ಟ್ರಂಪ್ ಬೆದರಿಕೆ!!


Donald Trump : ತೆರಿಗೆ ವಿಚಾರವನ್ನು ಇಟ್ಟುಕೊಂಡು ಬೇರೆ ಬೇರೆ ದೇಶಗಳೊಂದಿಗೆ ಹುಚ್ಚಾಟ ಮರೆಯುತ್ತಿರುವ ಅಮೆರಿಕ ಅಧ್ಯಕ್ಷ ಅವರು ಇದೀಗ ನಾರ್ವೆ ಸಚಿವರಿಗೆ ಕರೆ ಮಾಡಿ ನನಗೆ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿ ಇಲ್ಲದಿದ್ದರೆ 15 ಪರ್ಸೆಂಟ್ ಟ್ಯಾಕ್ಸ್ ಹಾಕ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಹೌದು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ರಾಷ್ಟ್ರವಾದ ನಾರ್ವೆಯ ಹಣಕಾಸು ಸಚಿವ ಜೆನ್ಸ್ ಸ್ಟೋಲ್ಟೆನ್ ಬರ್ಗ್ ಅವರಿಗೆ ದೂರವಾಣಿ ಕರೆ ತಮಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವಂತೆ ಹೇಳಿದ್ದಾರೆ. ಅಲ್ಲದೆ ‘ನೊಬೆಲ್ ಪ್ರಶಸ್ತಿ ನೀಡದಿದ್ದರೆ ನಾರ್ವೆಯ ಮೇಲೆ ಶೇ 15 ರಷ್ಟು ಹೆಚ್ಚುವರಿ ಆಮದು ತೆರಿಗೆ ವಿಧಿಸುತ್ತೇನೆ’ ಎಂದು ಹೇಳಿದ್ದಾರಂತೆ.
ನಾರ್ವೆಯ ಆರ್ಥಿಕ ಮೂಲಗಳಿಗೆ ಸಂಬಂಧಿಸಿದ ‘ದಾಹಗೆನ್ಸ್ ನೆಹರಿಂಗಸ್ಲಿವ್’ ಎಂಬ ಪತ್ರಿಕೆ ಈ ಸುದ್ದಿಯನ್ನು ಪ್ರಕಟಿಸಿದ್ದು, ಟ್ರಂಪ್ ಅವರು ಸ್ಟೋಲ್ಟೆನ್ ಬರ್ಗ್ ಅವರಿಗೆ, ‘ನಾನು ಭಾರತ-ಪಾಕಿಸ್ತಾನ ಹಾಗೂ ಕಾಂಬೋಡಿಯಾ-ಥೈಲ್ಯಾಂಡ್ ನಡುವಿನ ಅನೇಕ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಹೀಗಾಗಿ ನಾನು ಶಾಂತಿ ಪ್ರಿಯ. ಆಗಸ್ಟ್ ಆರಂಭದಲ್ಲಿ, ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆವಿನ್ ಲೆವಿಟ್ ಕೂಡ, ನೊಬೆಲ್ ಪ್ರಶಸ್ತಿ ಸಮಿತಿಯು ಟ್ರಂಪ್ ಅವರಿಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡುವ ಬಗ್ಗೆ ಇನ್ನೂ ಪರಿಗಣಿಸಿಲ್ಲ. ಇದು ಸರಿಯಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅಲ್ಲದೆ ಇತ್ತೀಚೆಗೆ, ಇಸ್ರೇಲ್ ಮತ್ತು ಪಾಕಿಸ್ತಾನ ದೇಶಗಳು ಟ್ರಂಪ್ ಅವರಿಗೆ ನೊಬೆಲ್ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಿರುವುದು ಕೂಡ ಬೆಳಕಿಗೆ ಬಂದಿತ್ತು. ಇನ್ನು ಟ್ರಂಪ್ ಅವರು ತಮ್ಮ ಮೊದಲ ಅಧಿಕಾರಾವಧಿಯಲ್ಲೂ ನೊಬೆಲ್ ಪ್ರಶಸ್ತಿಗಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದರು. ಅಕ್ಟೋಬರ್ 2024 ರಲ್ಲಿ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಟ್ರಂಪ್ ಅವರು, ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರು ಏನನ್ನೂ ಮಾಡದಿದ್ದರೂ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ಕೋಪದಿಂದ ಹೇಳಿದ್ದರು.
Comments are closed.