Tata Motors: ಟಾಟಾ ಮೋಟರ್ಸ್ ಮತ್ತೆ ಲಾಂಚ್ ಮಾಡಿದ ರಗಡ್ ಸ್ಟೈಲೀಶ್ ಟಾಟಾ ಸುಮೋ! ಇದರ ವಿಶೇಷತೆ ನಿಮಗೆ ಖಂಡಿತಾ ಇಷ್ಟವಾಗುತ್ತೆ!

Tata Motors: ಸದ್ಯ ಟಾಟಾ ಮೋಟರ್ಸ್ ಪುನಃ ಮಧ್ಯಮ ವರ್ಗದ ಕುಟುಂಬಗಳಿಗೆ ಕ್ಯಾಚಿ ಆಗುವಂತೆ 2025ರ ಹೊಸ ಟಾಟಾ ಸುಮೋ ಅನ್ನು ಲಾಂಚ್ ಮಾಡಿದೆ. ಮೊದಲಿನ ಟಾಟಾ ಸುಮೋಗಿಂತ 2025ರ ಹೊಸ ಟಾಟಾ ಸುಮೋ ಒಳ್ಳೆಯ ಫ್ಯೂಚರ್ಸ್ ಹೊಂದಿದೆ. ಸಾಮಾನ್ಯ ಕುಟುಂಬಗಳಿಗೂ ಕೈಗೆಟುಕುವ ಬೆಲೆಯಲ್ಲಿ ಲಭ್ಯ ಇರುವುದರಿಂದ ಭಾರತೀಯ ಮಾರ್ಕೆಟ್ಗಳಲ್ಲಿ ಮತ್ತೆ ಟಾಟಾ ಸುಮೋ ಕಾರಿನ ಖರೀದಿ ಹವಾ ಜೋರಾಗಲಿದೆ.

ಮುಖ್ಯವಾಗಿ ಡಿಸೇಲ್ ಮತ್ತು ಸಿಎನ್ಜಿ ಇಂದ ಓಡುವ ಕಾರು ಬೇಕು ಎನ್ನುವವರಿಗೆ ಟಾಟಾ ಸುಮೋ ಬೆಸ್ಟ್ ಚಾಯ್ಸ್ ಆಗಿದೆ. ಏಕೆಂದರೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಇದು ಲಾಭ ತಂದುಕೊಡುವ ಕಾರು. ಅಲ್ಲದೇ ಇಎಂಐ, ಎಕ್ಸ್ಚೇಂಜ್ ಹಾಗೂ ಡೌನ್ ಪೇಮೆಂಟ್ ಮಾಡಿಯೂ ಈ ಕಾರನ್ನು ಗ್ರಾಹಕರು ಖರೀದಿ ಮಾಡಬಹುದು.
ಹೊಸ ಟಾಟಾ ಸುಮೋ ಕಾರು ಒಂದು ಲೀಟರ್ ಇಂಧನಕ್ಕೆ ಬರೋಬ್ಬರಿ 42 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಭಾರತದ ರಸ್ತೆಗಳ ಕಂಡೀಷನ್ಗೆ ತಕ್ಕಂತೆ ಈ ಕಾರು ರೋಬಸ್ಟ್ ಬಾಡಿ ಜೊತೆಗೆ ಫ್ರೇಮ್ ಚೆಸ್ಸಿಸ್ (Frame Chassis) ಹೊಂದಿದೆ. ಕಾರಿನ ಇಂಜಿನ್ ಅನ್ನು ಲೋವೊರ್ ಆರ್ಪಿಎಂನಲ್ಲಿ ಅಧಿಕ ಟಾರ್ಕ್ (torque) ಒದಗಿಸಲು ಟ್ಯೂನ್ ಮಾಡಲಾಗಿದೆ.
ಕಾರಿನ ಮುಂಭಾಗದ ಗ್ರಿಲ್ ದೊಡ್ಡದಾಗಿದ್ದು ಎಲ್ಇಡಿ ಡಿಆರ್ಎಲ್ ಜೊತೆಗೆ ಪ್ರೀಮಿಯಂ ಟಚ್ ನೀಡಲಾಗಿದೆ. ಬ್ಲಾಕ್ ಬಂಪರ್ಸ್ ಫುಲ್ ಸ್ಟ್ರಾಂಗ್ ಇವೆ. Infotainment Systemಗೆ ಹೊಸ ಟಚ್ಸ್ಕ್ರೀನ್, ಪವರ್ ವಿಂಡೋ ಮತ್ತು ಸೆಂಟ್ರಲ್ ಲಾಕಿಂಗ್, ಎಸಿ, ಮೊಬೈಲ್ ಚಾರ್ಜರ್ ಸೇರಿ ಇನ್ನು ಕೆಲವು ಹೊಸ ಫ್ಯೂಚರ್ಸ್ ಕೂಡ ಹೊಂದಿದೆ. ಇದರ ಜೊತೆಗೆ ಕಾರಿನಲ್ಲಿ ವಸ್ತುಗಳನ್ನು ಸಾಗಿಸಲು ಸೀಟ್ಗಳನ್ನು ಫೋಲ್ಡ್ ಮಾಡಬಹುದು.
ಒಂದೇ ಬಾರಿಗೆ 7 ರಿಂದ 8 ಪ್ರಯಾಣಿಕರು ಅರಾಮಾಗಿ ಟಾಟಾ ಸುಮೋ ಕಾರಿನಲ್ಲಿ ಪ್ರಯಾಣಿಸಬಹುದು. ಹಳ್ಳಿ ಕಡೆ ಪ್ಯಾಸೆಂಜರ್ ಕಾರು ಆಗಿಯೂ ಇದನ್ನು ಉಯೋಗಿಸಬಹುದು. ಈ ಹೊಸ ಟಾಟಾ ಸುಮೋ ಕಾರಿನ ಬೆಲೆ ಕೇವಲ 7 ಲಕ್ಷದ 50 ಸಾವಿರ ರೂಪಾಯಿ (ex-Showroom) ಆಗಿದೆ.
Comments are closed.