Dharmasthala Case: ಮಂಜುನಾಥನನ್ನ ರಕ್ಷಿಸಿ, ಅಪಪ್ರಚಾರಿಗಳನ್ನ ಶಿಕ್ಷಿಸಿ – ಪ್ಲೇ ಕಾರ್ಡ್ ಹಿಡಿದು ವಿಧಾನಸೌಧಕ್ಕೆ ಬಂದ ಬಿಜೆಪಿ ನಾಯಕರು

Share the Article

Dharmasthala Case: ಧರ್ಮಸ್ಥಳ ಅಸಹಜ ಸಾವು ಪ್ರಕರಣ ಕುರಿತಂತೆ ಮಧಯಂತರ ವರದಿ ನೀಡುವಂತೆ ಬಿಜೆಪಿ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಇಂದು ಈ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ್‌ ಉತ್ತರ ಕೊಡುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಾತುರರಾಗಿದ್ದಾರೆ. ಮಂಜುನಾಥನನ್ನ ರಕ್ಷಿಸಿ, ಅಪಪ್ರಚಾರಿಗಳನ್ನ ಶಿಕ್ಷಿಸಿ ವಿಧಾನಸೌಧಕ್ಕೆ ಬೋರ್ಡ್ ಹಿಡಿದು ಶಾಸಕ ಶರಣಗೌಡ ಕುಂದಕೂರು ಆಗಮಿಸಿದ್ದಾರೆ. ಸತ್ಯ ಮೇವ ಜಯತೆ ಎಂಬ ಪ್ಲೇ ಕಾರ್ಡ್ ಹಿಡಿದು ವಿಧಾನಸೌಧಕ್ಕೆ ಆಗಮಿಸಿದ್ದಾರೆ.

ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅಶ್ವತನಾರಾಯಣ್ ಮಾತನಾಡಿ, ಧರ್ಮಸ್ಥಳ ಅಸಹಜ ಸಾವು ಪ್ರಕರಣ ಕುರಿತಂತೆ ಸದನದಲ್ಲಿ ಇವತ್ತು ಸರ್ಕಾರ ಉತ್ತರ ಕೊಡುತ್ತೆ. ಗೃಹ ಸಚಿವರು, ಸಿಎಂ, ಡಿಸಿಎಂ ಸದನದಲ್ಲಿ ಉತ್ತರ ಕೊಡಬೇಕಿದೆ. ಧರ್ಮಸ್ಥಳ ಪ್ರಕರಣದಲ್ಲಿ ಬಹಳ ಸ್ಪಷ್ಟವಾಗಿ ಉತ್ತರ ಕೊಡಲಿ. ಅನಾಮಿಕ ವ್ಯಕ್ತಿಯ ಬಗ್ಗೆಯು ತನಿಖೆ ಆಗಲಿ. ಸೋಷಿಯಲ್ ಮೀಡಿಯಾದಲ್ಲಿ ಆರೋಪಗಳನ್ನು ಮಾಡ್ತಿದ್ದಾರೆ. ಅವರ ಮೇಲೆ ಸುಮೊಟು ಕೇಸ್ ಹಾಕಬೇಕು ಎಂದು ಆಗ್ರಹಿಸಿದರು.

ಹಿಂದು ಕಾರ್ಯಕರ್ತರ ಮೇಲೆ ಕಾರಣ ಇಲ್ಲದೆ ಸುಮೋಟು ಕೇಸ್ ಹಾಕ್ತಾರೆ. ಧರ್ಮಸ್ಥಳದಲ್ಲಿ ಅಪಪ್ರಚಾರ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು. ಷಡ್ಯಂತ್ರ ಏನ್ ಆಗಿದೆ ಎಂದು ಹೇಳಬೇಕಲ್ಲಾ? ಗಾಳಿಯಲ್ಲಿ ತೇಲಿಸುವ ಕೆಲಸ ಆಗಬಾರದು. ತನಿಖೆ ಆಗ್ತಿದೆ, ಷಡ್ಯಂತ್ರದ ಬಗ್ಗೆ ತಿಳಿಸಲಿ. ಸುಪ್ರೀಂ ಕೋರ್ಟ್ ಗೆ ಲಾಯರ್ ಗಳನ್ನ ಇಟ್ಟುಕೊಂಡಿದ್ದಾರೆ. ಇಷ್ಟ ಬಂದಾಗೆ ಕಥೆಯನ್ನ ಸೃಷ್ಟಿ ಮಾಡ್ತಿದ್ದಾರೆ. ಸುಳ್ಳನ್ನೆ ಸತ್ಯವನ್ನಾಗಿ ಮಾಡಲು ಹೊರಟಿದ್ದಾರೆ. ಇದನ್ನ ಪಿ ಎಫ್ ಐ, ಎಸ್ ಡಿ‌ಪಿ ಐ ಮಾಡ್ತಿದೆ. ಅನಾಮಿಕ ವ್ಯಕ್ತಿ ಸಂಬಂಧಪಟ್ಟ ವ್ಯಕ್ತಿಯ ಮೇಲೆ ತನಿಖೆಯಾಗಲಿ ಎಂದು ಅಶ್ವತನಾರಾಯಣ್ ಹೇಳಿದರು.

Dharmasthala Case: ಧರ್ಮಸ್ಥಳ ಪ್ರಕರಣ: ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟವರಿಗೆ SIT ಯಿಂದ ಬಿಗ್‌ ಶಾಕಿಂಗ್‌ ನ್ಯೂಸ್‌

Comments are closed.