Bad comment: ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್ ವಿಚಾರ – ಇವಾಗ್ಲೂ ಅಶ್ಲೀಲ ಕಮೆಂಟ್ ಬರ್ತಿದ್ಯಾ? ರಮ್ಯ ಏನಂದ್ರು?

Bad comment: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್, ಹೈ ಕೋರ್ಟ್ ದರ್ಶನ್ ಮತ್ತು ಗ್ಯಾಂಗ್ ಜಾಮೀನು ರದ್ದು ಪಡಿಸಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿತ್ತು. ಈ ಸಂಬಂಧ ಮಾಜಿ ಸಂಸದೆ, ನಟಿ ರಮ್ಯ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈ ವಿಚಾರವಾಗಿ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್ ಗಳು ಬಂದ ಕುರಿತಾಗಿ ನಟಿ ರಮ್ಯಾ ದೂರು ದಾಖಲಿಸಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮೂರು ಜನ ಅರೆಸ್ಟ್ ಆಗಿದ್ದಾರೆ. ಈಗ ಅಶ್ಲೀಲ ಕಮೆಂಟ್ ಗಳು ಬರೋದು ಕಡಿಮೆಯಾಗಿದೆ. ಕೆಟ್ಟದಾಗಿರೋ ಮೆಸೆಜ್ ಗಳು ಬರ್ತಿಲ್ಲ. ಆದ್ರೆ ಸ್ವಲ್ಪ ಕಾಮೆಂಟ್ ಬರ್ತಿದೆ. ಪಬ್ಲಿಕ್ ಲೈಫ್ ನಲ್ಲಿ ಇದ್ದಾಗ ಸ್ವಲ್ಪ ಕಾಮೆಂಟ್ಸ್ ಬರೋದು ಕಾಮನ್ ಅದನ್ನು ಸಹಿಸಿಕೊಳ್ಳುತ್ತೇನೆ ಎಂದು ನಟಿ ರಮ್ಯಾ ಹೇಳಿದ್ದಾರೆ.
ಈ ರೀತಿಯ ಕೆಟ್ಟ ಮೆಸೇಜ್ ನನಗೆ ಮಾತ್ರವಲ್ಲ. ಸಾಕಷ್ಟು ಮಹಿಳೆಯರಿಗೆ ಈ ರೀತಿಯ ಕಾಮೆಂಟ್ ಬರ್ತಿತ್ತು. ಬೇರೆ ಮಹಿಳೆಯರಿಗೂ ಈ ತರ ಆಗಬಾರದು ಅಂತ ದೂರು ಕೊಟ್ಟಿದ್ದೆ. ದೂರು ಕೊಟ್ಟ ಬಳಿಕ ಬಹಳಷ್ಟು ಜನ ಹೇಳ್ತಿದ್ದಾರೆ ನನಗೆ ಈ ಬಗ್ಗೆ ಹೇಳಿದ್ದಾರೆ ಎಂದರು.
Comments are closed.